Friday, July 1, 2022

Latest Posts

ಮಣಿಯನಹಳ್ಳಿಯಲ್ಲಿ ಉದ್ಘಾಟನೆಗೊಂಡಿತು ನೂತನ ಬಿ.ಎಂ.ಸಿ. ಕಟ್ಟಡ

ಹೊಸ ದಿಗಂತ ವರದಿ, ಕೋಲಾರ:

ತಾಲ್ಲೂಕಿನ ವೇಮಗಲ್ ಹೋಬಳಿ ಮಣಿಯನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ 3000ಲೀ ಸಾಮರ್ಥ್ಯದ
ಬಿ.ಎಂ.ಸಿ. ಘಟಕ ಮತ್ತು ನೂತನ ಕಟ್ಟಡವನ್ನು ತಾಲ್ಲೂಕಿನ ನಿರ್ದೇಶಕ ಡಿ.ವಿ. ಹರೀಶ್ ಉದ್ಘಾಟಿಸಿ, ಜ.24ರಿಂದ ಹಾಲಿನ ಖರೀದಿದರ
ಏರಿಕೆಯ ಸುಳಿವು ನೀಡಿದರು.
ಈ ಸಂದರ್ಭ ಮಾತನಾಡಿದ ಅವರು, ಒಕ್ಕೂಟದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಶುದ್ಧ ಮತ್ತು
ಗುಣಮಟ್ಟದ ಹಾಲನ್ನು ನೀಡಬೇಕೆಂದು ಉತ್ಪಾದಕರಿಗೆ ಮನವರಿಕೆ ಮಾಡಿದರು.
ಜ.24ರಿಂದ ಹಾಲಿನ ಖರೀದಿ ದರ ಹೆಚ್ಚಳ ಮಾಡಿದ್ದು ಹಾಲು ಶೇಖರಣೆ ಮತ್ತು ಗುಣಮಟ್ಟಕ್ಕೆ ಒತ್ತು ನೀಡಬೇಕೆಂದು ಕರೆ ನೀಡಿದರು. ಹಂತ ಹಂತವಾಗಿ ತಾಲ್ಲೂಕಿನಾದ್ಯಂತ ಬಿ.ಎಂ.ಸಿ. ಕೇಂದ್ರಗಳ ಮೂಲಕ ಹಾಲು ಸಾಗಾಣಿಕೆ ಮಾಡಲಾಗುತ್ತದೆ ಎಂದರು.
ಸದರಿ ಸಂಘಕ್ಕೆ ಬಿ.ಎಂ.ಸಿ.  ಘಟಕದ ವೆಚ್ಚ ರೂ.14ಲಕ್ಷ, ಬಿ.ಎಂ.ಸಿ. ಸಿವಿಲ್ ಕಾಮಗಾರಿ ರೂ.1ಲಕ್ಷ, ಒಕ್ಕೂಟದ ಕಟ್ಟಡ ಅನುಧಾನ ರೂ.3ಲಕ್ಷ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕಟ್ಟಡ ಸಹಾಯ ಧನ ರೂ.1ಲಕ್ಷ, ನೀಡಿದ್ದು, ಕೆ.ಎಂ.ಎಫ್. ಕಟ್ಟಡ ಅನುಧಾನ ರೂ.೩ಲಕ್ಷ ಮತ್ತು ಸಮೂಹ ಹಾಲು ಕರೆಯುವ ಯಂತ್ರಗಳ ವೆಚ್ಚ ರೂ.2.5ಲಕ್ಷ ಹಾಗೂ ಸ್ವಯಂ ಚಾಲಿತ ಹಾಲು ಶೇಖರಣೆ ಘಟಕ (ಎ.ಎಂ.ಸಿ.ಯು) ನೀಡುವುದಾಗಿ ಭರವಸೆ ನೀಡಿದರು.
ಮಣಿಯನಹಳ್ಳಿ ಹಾ.ಉ.ಸ.ಸಂಘ ತಾಲ್ಲೂಕಿನಲ್ಲಿ ಮಾದರಿ ಹಾಲು ಉತ್ಪಾದಕರ ಸಹಕಾರ ಸಂಘವಾಗಿ ಮರ್ಪಾಡಾಗಲು ಬೇಕಾದ ಎಲ್ಲಾ ಸೌಲಭ್ಯಗಳನ್ನು ನೀಡುವುದಾಗಿ ತಿಳಿಸಿದರು.
ಶಿಬಿರದ ಉಪವ್ಯವಸ್ಥಾಪಕ ಡಾ.ಎ.ಸಿ. ಶ್ರೀನಿವಾಸಗೌಡ ಮಾತನಾಡಿ, ಹಾಲಿನ ಗುಣಮಟ್ಟದ ಜೊತೆಗೆ ಜೈವಿಕ ಗುಣಮಟ್ಟ ಕಾಪಾಡುವಂತೆ ತಿಳಿಸಿದರು. ಒಕ್ಕೂಟದಿಂದ ಸಿಗುವ ತಾಂತ್ರಿಕ ಸೌಲಭ್ಯಗಳಾದ ತುರ್ತುಕರೆ ಸೌಲಭ್ಯ, ಗುಂಪು ವಿಮಾ ಯೋಜೆನೆ, ಕೋಮುಲ್ ವಿಮಾ ಯೋಜನೆ, ಕಾಲ ಕಾಲಕ್ಕೆ ಲಸಿಕೆ ಕಾರ್ಯಕ್ರಮ, ಪಶು ಆಹಾರ ಮತ್ತು ಖನಿಜ ಮಿಶ್ರಣ ನೀಡುವುದು ಮಾಡಿ ಎಂದು ಉತ್ಪಾದಕರಿಗೆ ಕರೆ ನೀಡಿದರು.
ಮಣಿಯನಹಳ್ಳಿ ಸಂಘದ ಅಧ್ಯಕ್ಷ ಯಳಗಪ್ಪ ಮಾತನಾಡಿ, ಕಾರ್ಯಕಾರಿ ಮಂಡಳಿ, ಹಾಲು ಉತ್ಪಾದಕರು ಮತ್ತು ಗ್ರಾಮಸ್ಥರ ಸಹಕಾರದಿಂದ ಹಾಲು ಶೇಖರಣೆ ಮತ್ತು ಹಾಲಿನ ಗುಣಮಟ್ಟ ಹೆಚ್ಚಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾರ್ಯಕಾರಿ ಮಂಡಳಿ ನಿರ್ದೇಶಕರುಗಳು, ತಾಲ್ಲೂಕು ಪಂಚಾಯಿತಿ ಸದಸ್ಯರುಗಳು, ಗ್ರಾಮ ಪಂಚಾಯಿತಿ ಸದಸ್ಯರುಗಳು, ಗ್ರಾಮದ ಮುಖಂಡರುಗಳು, ಅಕ್ಕ ಪಕ್ಕದ ಹಾ.ಉ.ಸ.ಸಂಘಗಳ ಕಾರ್ಯದರ್ಶಿಗಳು, ಬಿ.ಎಂ.ಸಿ. ತಾಂತ್ರಿಕರಾದ ತಿಪ್ಪಾರೆಡ್ಡಿ, ರವೀಂದ್ರ, ಮತ್ತು ವಿಸ್ತರಣಾಧಿಕಾರಿಗಳಾದ ಶ್ರೀನಿವಾಸ್, ವಿ.ರಾಜಬಾಬು, ನಾಗಪ್ಪ, ಅಣ್ಣಪ್ಪ ತಡಕೋಡ್, ಭರತ್, ನಾಗೇಂದ್ರ, ರಾಮಾಂಜಿನಪ್ಪ, ಸಮೀರ್ ಪಾಷ, ಸಂಘದ ಕಾರ್ಯದರ್ಶಿ ಎಂ.ಎ.ನರಸಿಂಹಮೂರ್ತಿ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss