ಹೊಸ ದಿಗಂತ ವರದಿ, ವಿಜಯಪುರ:
ವಿಜಯಪುರ ಜಿಲ್ಲೆಯಲ್ಲಿ ಭಾನುವಾರ ನಡೆದ ಎರಡನೇ ಹಂತದ ಗ್ರಾಪಂ ಚುನಾವಣೆಯಲ್ಲಿ ಇಬ್ಬರು ಕೊರೋನಾ ಸೋಂಕಿತರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.
ಜಿಲ್ಲೆಯ ಸಿಂದಗಿ ತಾಲೂಕಿನ ನಾಗಾವಿ ಬಿಕೆ ಗ್ರಾಮ ಪಂಚಾಯಿತಿ ಮತಕೇಂದ್ರದಲ್ಲಿ ಓರ್ವ, ದೇವರಹಿಪ್ಪರಗಿ ತಾಲೂಕಿನ ಮಣೂರ ಗ್ರಾಪಂನ ಮತಕೇಂದ್ರದಲ್ಲಿ ಓರ್ವ ಸೇರಿದಂತೆ ಇಬ್ಬರು ಕೊರೋನಾ ಸೋಂಕಿತರು ಮತದಾನ ಮಾಡಿದ್ದಾರೆ.