Wednesday, July 6, 2022

Latest Posts

ಮತದಾರರಿಗೆ ಪ್ರೇರೇಪಿಸಲು ಮಾದರಿ ಮತಗಟ್ಟೆ, ಉತ್ಸಾಹದ ಮತದಾನ

ಹೊಸದಿಗಂತ ವರದಿ,ಕೊಪ್ಪಳ:

ತಾಲೂಕಿನ 18 ಗ್ರಾಮ ಪಂಚಾಯತ್ ಚುನಾವಣೆಯಲ್ಲಿ 347 ಸ್ಥಾನಗಳಲ್ಲಿ 324 ಸ್ಥಾನಗಳಿಗೆ ಚುನಾವಣೆ ಜರುಗಿತು. ಈಗಾಗಲೆ 23 ಸ್ಥಾನಗಳಲ್ಲಿ ಅವಿರೋಧವಾಗಿ ಆಯ್ಕೆಗೊಂಡಿದ್ದು, 870 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಕೊವಿಂಡ್ 19 ಹಿನ್ನಲೆಯಲ್ಲಿ ಮತದಾನಕ್ಕೂ ಮುನ್ನಾ ಸ್ಕ್ರೀನಿಂಗ್ ಮತ್ತು ಕಡ್ಡಾಯ ಮಾಸ್ಕ್ ಹಾಕಿದ್ದರು. ಮತಗಟಗಟ್ಟೆಗಳಲ್ಲಿ ಸ್ಯಾನಿಟೈಜರ್ ಗೊಳಿಸಿ ಶುಚಿಗೊಳಿಸಲಾಯಿತು. ಇನ್ನೂ ನೂತನ ಮತದಾರರನ್ನು ಸೆಳೆಯಲು ತಳಿರು ತೋರಣಗಳಿಂದ ಸಿಂಗರಿಸಿ ಸ್ವಾಗತಿಸಿದರು.

ಮೊದಲ ಬಾರಿಗೆ ಮತದಾನ ಮಾಡಲು ಯುವ ಸಮುದಾಯ. ಉತ್ಸಾಹದಿಂದ ಮತಗಟ್ಟೆಗೆ ಆಗಮಿಸಿ ಹಕ್ಕು ಚಲಾಯಿಸಿದರು.
ತಾಲೂಕಿನ ಶ್ರೀರಾಮನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಗೆ ಉತ್ಸಾಹದಿಂದ ವೃದ್ಧರು, ವಿಕಲಚೇತನರು ಆಗಮಿಸಿ ಮತಚಲಾವಣೆ ಮಾಡಿದರು.

ಢಣಾಪೂರ ಗ್ರಾಮದಲ್ಲಿ 102 ವರ್ಷದ ಅಜ್ಜಿ ವೀಲ್ ಚೇರ್ ಮೂಲಕ ಆಗಮಿಸಿ ಮತದಾನ ಚಲಾಯಿಸಿದ್ದು ವಿಶೇಷವಾಗಿದೆ. ಎಲ್ಲಾ ಮತಗಟ್ಟೆಗಳಲ್ಲಿ ರ್ಯಾಪ್ ವ್ಯವಸ್ಥೆ ಮಾಡಲಾಗಿದ್ದು, ಶುದ್ದ ಕುಡಿಯುವ ನೀರು ಸೇರಿದಂತೆ ಇನ್ನಿತರ ವ್ಯವಸ್ಥೆ ಮಾಡಲಾಯಿತು.

ಹತ್ತನೇ ಬಾರಿಗೆ ಸ್ಪರ್ಧೆ: ಜಿಲ್ಲೆಯ ಗಂಗಾವತಿ ತಾಲೂಕಿನ ಶ್ರೀರಾಮನಗರದ ಮತಗಟ್ಟೆಯಲ್ಲಿ 80 ವರ್ಷದ ವಯೋವೃದ್ಧ ರೆಡ್ಡಿ ವೀರರಾಜು ಅವರು, ಹತ್ತನೆ ಬಾರಿ ಗ್ರಾಮ ಪಂಚಾಯತಿಗೆ ಸ್ಪರ್ದೆ ಮಾಡಿ, ಮತದಾನ ಚಲಾಯಿಸಿದರು.

ಅಜ್ಜಿ ಮತದಾನ: ಗಂಗಾವತಿ ಸಮೀಪದ ಹೆಬ್ಬಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡನೇ ಹಂತದ ಗ್ರಾ.ಪಂ.ಚುನಾವಣೆಯಲ್ಲಿ ತಮ್ಮ ಮತವನ್ನು 120 ವರ್ಷದ ಹಿರಿಯ ಜೀವಿಕಂಚಿ ಚೌಡಮ್ಮ  ಹೆಬ್ಬಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತದಾನ ಮಾಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss