ಹೊಸ ದಿಗಂತ ವರದಿ, ಬಳ್ಳಾರಿ:
ಅಭ್ಯರ್ಥಿಗಳ ಚಿನ್ನೆ ಅದಲು, ಬದಲು ಆದ ಘಟನೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಮತ್ತಿಹಳ್ಳಿ ಗ್ರಾಮದಲ್ಲಿ ಭಾನುವಾರ ನಡೆದಿದೆ.
ಮತದಾನ ಮಾಡಲು ಗ್ರಾಮದ ಮತಗಟ್ಟೆಗೆ ಕೇಂದ್ರಕ್ಕೆ ತೆರಳಿದ ಮತದಾರರು ಗೊಂದಲಕ್ಕೀಡಾಗಿದ್ದು, ಈ ಕುರಿತು ಸ್ಥಳೀಯ ಚುಮಾವಣೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಇದು ಕೆಲಕಾಲ ತೀವ್ರ ಆತಂಕ ಹಾಗೂ ಗೊಂದಲಕ್ಕೆ ಕಾರಣವಾಯಿತು. ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಮತ್ತಿಹಳ್ಳಿ ಗ್ರಾ.ಪಂ.ನ 1 ಹಾಗೂ 2ನೇ ವಾರ್ಡ್ನಲ್ಲಿ ಈ ಘಟನೆ ನಡೆದಿದ್ದು, ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ನಿರ್ಲಕ್ಣ್ಯವಹಿಸಿದ ಅಧಿಕಾರಿಗೆ ನೋಟೀಸ್ ನೀಡಿ ಚುನಾವಣೆ ಮತ್ತೆ ನಡೆಸಲಾಗುವುದು ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದರು. ಗ್ರಾಮದ ಒಂದನೇ ವಾರ್ಡ್ನ ಅಭ್ಯರ್ಥಿಯ ಗುರುತು 2ನೇ ವಾರ್ಡ್ಗೆ, 2ನೇ ವಾರ್ಡ್ನ ಅಭ್ಯರ್ಥಿ ಗುರುತು 1ನೇ ವಾರ್ಡ್ಗೆ ಶಿಫ್ಟ್ ಆಗಿದೆ, ಇದು ಆತಂಕ ಹಾಗೂ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಕೆಲಕಾಲ ಗ್ರಾಮಸ್ಥರು ಪ್ರತಿಭಟನೆ: ಚಿಹ್ನೆ ಅದಲು -ಬದಲಾದ ಹಿನ್ನೆಲೆ ಎರಡು ವಾರ್ಡ್ಗಳಲ್ಲಿ ಮತದಾನ ಮಾಡದೇ, ಮತದಾರರು ಹಾಗೂ ಗ್ರಾಮಸ್ಥರು ಮತಗಟ್ಟೆ ಕೇಂದ್ರದ ಎದುರು ಪ್ರತಿಭಟನೆ ನಡೆಸಿ ಸ್ಥಳಕ್ಕೆ ಕೂಡಲೇ ಚುಮಾವಣೆ ಅಧಿಕಾರಿಗಳು ಆಗಮಿಸಬೇಕು ಎಂದು ಪಟ್ಟು ಹಿಡಿದರು. ಹಳ್ಳಿ ಅಖಾಡ ಇದಾಗಿದ್ದು ತೀವ್ರ ಜಿದ್ದಾಜಿದ್ದಿ ಏರ್ಪಡುವುದು ಸಾಮಾನ್ಯ, ಚುನಾವಣೆ ನಡೆಸುವುದು ಎಷ್ಟು ಕಷ್ಟು ಎನ್ನುವುದು ಅಧಿಕಾರಿಗಳಿಗೆ ತಿಳಿದಿದ್ದರೂ ಬೇಜವಾಬ್ದಾರಿ ವಹಿಸಿದ ಅಧಿಕಾರಿಗಳ ವಿರುದ್ದ ಕಾನೂನು ಕ್ರಮ ಜರುಗಿಸಬೇಕು, ಸ್ಥಳಕ್ಕೆ ಅಧಿಕಾರಿಗಳು ಆಗಮಿಸಬೇಕು ಎಂದು ಗ್ರಾಮಸ್ಥರು ಪಟ್ಟುಹಿಡಿದರು. ನಂತರ ಸ್ಥಳಕ್ಕೆ ತಹಸಿಲ್ದಾರ್ ಅವರು ಆಗಮಿಸಿ ಗ್ರಾಮಸ್ಥರನ್ನು ಮನವೊಲಿಸಿ ಮತ್ತೋಮ್ಮೆ ಚುನಾವಣೆ ನಡೆಸಲಾಗುವುದು ಎಂದು ಭರವಸೆ ನೀಡಿದರು.