Friday, July 1, 2022

Latest Posts

ಮತದಾರರಿಗೆ ಹಂಚಲು ಇರಿಸಿದ್ದ ಕುಕ್ಕರ್ ಗಳನ್ನು ವಶಕ್ಕೆ ಪಡೆದುಕೊಂಡ ಚುನಾವಣಾ ಅಧಿಕಾರಿಗಳು

ಹೊಸದಿಗಂತ ವರದಿ,ಶಿವಮೊಗ್ಗ:

ಗ್ರಾಪಂ ಚುನಾವಣೆಗೆ ಕೆಲವೇ ಗಂಟೆ ಇರುವಾಗ ಮತದಾರರಿಗೆ ಹಂಚಲು ಇರಿಸಿದ್ದು ಎನ್ನಲಾದ 200 ಕುಕ್ಕರ್ ಗಳನ್ನು ಚುನಾವಣಾ ಅಧಿಕಾರಿಗಳು ಸೋಮವಾರ ವಶಕ್ಕೆ ಪಡೆದುಕೊಂಡಿದ್ದಾರೆ.
ಸಮೀಪದ ನಿಧಿಗೆ ಗ್ರಾಪಂ ಗೆ ಸ್ಪರ್ಧಿಸಿರುವ ಧರಣೇಂದ್ರ ಎಂಬುವರ ತೋಟದ ಮನೆಯಲ್ಲಿ ಈ ಕುಕ್ಕರ್ ಗಳು ಪತ್ತೆಯಾಗಿವೆ. ಎಲ್ಲವೂ ಮೂರು ಲೀಟರ್ ಸಾಮರ್ಥ್ಯದವಾಗಿವೆ. ಕುಕ್ಕರ್ ಜೊತೆ ಧರಣೇಂದ್ರ ಅವರ ಚುನಾವಣಾ ಕರಪತ್ರಗಳೂ ಲಭಿಸಿವೆ.
ತಾಪಂ ಇಒ ಡಾ.ಕಲ್ಲಣ್ಣ, ಚುನಾವಣಾ ಅಧಿಕಾರಿ ಚಂದ್ರಪ್ಪ, ಗ್ರಾಮಾಂತರ ಪೊಲೀಸರು ದಾಳಿಯಲ್ಲಿ ಪಾಲ್ಗೊಂಡಿದ್ದರು. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss