Sunday, April 11, 2021

Latest Posts

ಮತದಾರರೇ ಭ್ರಷ್ಟರಾದರೆ ಭ್ರಷ್ಟಾಚಾರಕ್ಕೆ ಕಡಿವಾಣವೆಲ್ಲಿ ?: ಸಿದ್ದಗಂಗಾ ಮಠಾಧೀಶರ ವಿಷಾದ

ಹೊಸದಿಗಂತ ವರದಿ ಮಡಿಕೇರಿ :

ಚುನಾವಣೆ ವ್ಯವಸ್ಥೆಯೇ ಹದಗೆಟ್ಟಿದೆ, ಹಣವಿಲ್ಲದೆ ಎನೂ ನಡೆಯುತ್ತಿಲ್ಲ, ಮತದಾರರೇ ಭ್ರಷ್ಟರಾದರೆ ಭ್ರಷ್ಟಾಚಾರಕ್ಕೆ ಕಡಿವಾಣವೆಲ್ಲಿ ಎಂದು ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದ್ದಾರೆ.
ಕೊಡ್ಲಿಪೇಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಪ್ರಜಾಪ್ರಭುತ್ವ ಬೇರು ಮಟ್ಟದಲ್ಲಿ ಭದ್ರಗೊಳ್ಳಬೇಕೆಂದು ಗ್ರಾಮ ಪಂಚಾಯತ್ ಚುನಾವಣೆ ನಡೆಯುತ್ತದೆ, ಆದರೆ ಹಣವಿಲ್ಲದ ಗೆದ್ದವರು ಯಾರಿದ್ದೀರಿ ಎಂದು ಪ್ರಶ್ನಿಸಿದರು.
ಹೀಗಾದರೆ ಪ್ರಜಾಪ್ರಭುತ್ವ ಉಳಿಯುವುದು ಹೇಗೆ ಎಂದು ಪ್ರಶ್ನಿಸಿದ ಅವರು, ಇಂದು ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಗಿಂತ ಗ್ರಾಮ ಪಂಚಾಯತ್ ಚುನಾವಣೆಗೆ ಪೈಪೋಟಿ ಹೆಚ್ಚಿದೆ. ಈ ಬಾರಿ ಅನುದಾನ ಹೆಚ್ಚು ಬರುತ್ತದೆ ಎಂದು ಸ್ಪರ್ಧೆ ಜಾಸ್ತಿ ಆಗಿದೆ. ರಾಷ್ಟ್ರದ ಪ್ರಧಾನಿ ನರೇಂದ್ರಮೋದಿಯವರ ಆಶಯದಂತೆ ಒಂದು ರಾಷ್ಟ್ರ ಒಂದು ಚುನಾವಣೆ ಎಂಬ ನೀತಿ ಜಾರಿಗೆ ಬರಬೇಕು, ಆಗ ಮಾತ್ರ ಭ್ರಷ್ಟಾಚಾರ ತಡೆಯಬಹುದು ಎಂದು ಸಿದ್ದಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss