Sunday, August 14, 2022

Latest Posts

ಮತ್ತಷ್ಟು ಎತ್ತರಕ್ಕೇರಿದ ಕೊಡಗು -ಕೇರಳ ಸಂಪರ್ಕದ ಕುಟ್ಟ -ಮಾನಂದವಾಡಿ ರಸ್ತೆ ತಡೆಗೋಡೆ

ಕುಟ್ಟ: (ಕೊಡಗು): ಕೊರೋನಾ ಹಬ್ಬುವುದನ್ನು ನಿಯಂತ್ರಿಸುವ ಸಲುವಾಗಿ ಕಳೆದ ಮೂರು ತಿಂಗಳಿನಿಂದ ಸಂಚಾರ ತಡೆ ಮಾಡಿರುವ ಕೊಡಗು -ಕೇರಳ ಸಂಪರ್ಕದ ಕುಟ್ಟ -ಮಾನಂದವಾಡಿ ರಸ್ತೆಗೆ ಶನಿವಾರ ಮತ್ತೆ ಮಣ್ಣು ಸುರಿಯುವ ಮೂಲಕ ದಿಬ್ಬವನ್ನು ಎತ್ತರಿಸಲಾಗಿದೆ.
ಈ ಹಿಂದೆ ಮಣ್ಣು ತುಂಬಿ ರಚಿಸಿದ ತಡೆಗೋಡೆ ಮೇಲೆ ಕಾಡಾನೆಗಳು ಓಡಾಡಿದ ಪರಿಣಾಮ ರಸ್ತೆಗೆ ಹಾಕಿದ ಮಣ್ಣಿನ ತಡೆಗೋಡೆ( ದಿಬ್ಬ)ಯ ಎತ್ತರ ಇಳಿದಿತ್ತು. ಇದನ್ನೇ ಕೆಲವರು, ಸಾಮಾಜಿಕ ಜಾಲತಾಣದ ಗುಂಪುಗಳಲ್ಲಿ ಚಿತ್ರ ಸಹಿತ ಪ್ರಕಟಿಸುವ ಮೂಲಕ ‘ ಕುಟ್ಟ-ಮಾನಂದವಾಡಿ ರಸ್ತೆಯಲ್ಲಿ ಮಣ್ಣನ್ನು ತೆರವುಗೊಳಿಸಿ ಇಂದಿನಿಂದ ಸಂಚಾರ ಮುಕ್ತ ಮಾಡಲಾಗಿದೆ’ ಎಂಬ ಸುಳ್ಳು ಸುದ್ದಿಯನ್ನು ಹರಡಿದ್ದರು.
ಇದನ್ನು ಗಮನಿಸಿದ ಕುಟ್ಟ ಪೊಲೀಸ್ ಠಾಣೆಯ ಉಪನಿರೀಕ್ಷಕ ಚಂದ್ರಪ್ಪ ಅವರು ಶನಿವಾರ ಜೆಸಿಬಿ ಮೂಲಕ ಹೆಚ್ಚಿನ ಮಣ್ಣು ಹಾಕಿ ತಡೆಗೋಡೆಯ ಎತ್ತರವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.
ಕುಟ್ಟ ಪೋಲಿಸ್ ಠಾಣೆಯ ಮುಂಭಾಗದಲ್ಲಿ ಚೆಕ್‍ಪೋಸ್ಟ್ ಇದ್ದು, ಗಡಿಯಿಂದ ಎರಡು ಕಿ.ಮೀ. ದೂರದಲ್ಲಿದೆ. ಗಡಿಭಾಗದಲ್ಲಿ ಹಿಂದೆ ಉಪಯೋಗಿಸುತಿದ್ದ ಪೊಲೀಸ್ ಮತ್ತು ಅರಣ್ಯ ಇಲಾಖೆಯ ಎರಡು ಕಟ್ಟಡಗಳಿದ್ದು ಅವೆÀರೆಡರ ನಡುವೆ ಇದ್ದ ಸ್ಥಳ ಮತ್ತು ಅರಣ್ಯ ಚೆಕ್ ಪೋಸ್ಟ್‍ನ ಒಳಭಾಗದಿಂದ ಜನರು ನುಸುಳಿ ಹೋಗುತ್ತಿದ್ದುದನ್ನು ತಡೆಯುವ ನಿಟ್ಟಿನಲ್ಲಿ ಕಟ್ಟಡಗಳ ನಡುವೆಯೂ ಮಣ್ಣಿನ ತಡೆಗೋಡೆ ರಚಿಸಲಾಗಿದೆ. ಕುಟ್ಟ ಠಾಣೆಯ ಸಹಾಯಕ ಉಪ ನಿರೀಕ್ಷಕ ಮೊಹಿದ್ದೀನ್ ಅವರು ಸ್ಥಳಕ್ಕೆ ಭೇಟಿ ನೀಡಿದ ಮಾಧ್ಯಮ ಪ್ರತಿನಿಧಿಗಳಿಗೆ ಈ ಕುರಿತು ಮಾಹಿತಿ ನೀಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss