Monday, August 8, 2022

Latest Posts

ಮತ್ತೆ ಇವಿಎಂ ಕ್ಯಾತೆ ತೆಗೆದ ಕಾಂಗ್ರೆಸ್| ಚುನಾವಣಾಧಿಕಾರಿ ಹೇಳಿದ್ದೇನು ನೋಡಿ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಚುನಾವಣಾ ಫಲಿತಾಂಶಗಳು ಹೊರಬೀಳುತ್ತಿದ್ದಂತೆಯೇ ಕಾಂಗ್ರೆಸ್ ಪಾಳಯದಲ್ಲಿ ಸೋಲಿನ ಭಯ ಹೆಚ್ಚಾಗುವುದಲ್ಲದೆ ಇವಿಎಂ ಗಳ ಮೇಲೆ ಆರೋಪ ಮಾಡಲು ಮುಂದಾಗಿದ್ದಾರೆ.

ಬಿಹಾರ ಚುನಾವಣೆಯಲ್ಲಿ ಎನ್ ಡಿ ಎ ಸರ್ಕಾರ 120ರ ಗಡಿ ದಾಟುತ್ತಿದಂತೆಯೇ ಕಾಂಗ್ರೆಸ್ ಮುಖಂಡರು ಇವಿಯಂ ಕಾರ್ಯ ವೈಖರಿ ವಿರುದ್ಧ ತಮ್ಮ ವಾದ ಕೈಗೆತ್ತಿಕೊಂಡಿದ್ದಾರೆ.

ಈ ಬಗ್ಗೆ ಬಿಹಾರದ ಕಾಂಗ್ರೆಸ್ ಮುಖಂಡ ಉದಿತ್ ರಾಜ್ ಟ್ವೀಟ್ ಮಾಡಿದ್ದು, ಚಂದ್ರ ಹಾಗೂ ಮಂಗಳಕ್ಕೆ ಕಳುಹಿಸುವ ಯಂತ್ರಗಳನ್ನು ಭೂಮಿಯಿಂದ ನಿಯಂತ್ರಿಸಲಾಗುವಂತಹ ಈ ಕಾಲದಲ್ಲಿ ಇವಿಯಂ ಯಂತ್ರಗಳನ್ನು ಹ್ಯಾಕ್ ಮಾಡಲಾಗುವುದಿಲ್ಲವೇ? ಎಂದು ಹೇಳಿದ್ದಾರೆ.

ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚುನಾವಣಾ ಆಯುಕ್ತ ಸುದೀಪ್ ಜೈನ್, ಇವಿಎಂ ಹ್ಯಾಕ್ ಮಾಡಲು ಸಾಧ್ಯವಿಲ್ಲ, ಇವಿಎಂಗಳನ್ನು ಟ್ಯಾಂಪರ್ ಮಾಡಲಾಗುವುದಿಲ್ಲ. ಈಗಾಗಲೇ ಸುಪ್ರೀಂ ಕೋರ್ಟ್ ಇವಿಎಂ ನ ಗುಣಮಟ್ಟದ ಕುರಿತು ಸ್ಪಷ್ಟನೆ ನೀಡಿದೆ. 2017ರಲ್ಲಿಯೂ ಇವಿಎಂ ಚಾಲೆಂಜ್ ಅನ್ನು ಚುನಾವಣಾ ಆಯೋಕ ಸ್ವೀಕರಿಸಿತ್ತು ಎಂದು ತಿರುಗೇಟು ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss