Wednesday, August 17, 2022

Latest Posts

ಮತ್ತೆ ಐವರು ಡ್ರಗ್ಸ್​ ಪೆಡ್ಲರ್ ಎನ್​ಸಿಬಿ ಬಲೆಗೆ : ಓರ್ವನಿಗಿದೆ ಬಾಲಿವುಡ್ ನಟ ಸುಶಾಂತ್​ ಸಿಂಗ್ ಕೇಸ್​ನಲ್ಲಿ ನಂಟು!

ಮುಂಬೈ: ಡ್ರಗ್ಸ್‌ ಜಾಲಗಳನ್ನು ಭೇದಿಸುತ್ತಿರುವ ಮಾದಕ ವಸ್ತು ನಿಯಂತ್ರಣ ದಳ (ಎನ್​ಸಿಬಿ) ಬಲೆಗೆ ಮತ್ತೆ ಐದು ಜನರು ಬಿದ್ದಿದ್ದಾರೆ. ಅದರಲ್ಲಿ ಓರ್ವ ಬಾಲಿವುಡ್ ನಟ ಸುಶಾಂತ್​ ಸಿಂಗ್ ರಜಪೂತ್​ ಸಾವಿನ ಪ್ರಕರಣ ಸಂಬಂಧ ಡ್ರಗ್ಸ್ ಲಿಂಕ್ ಕುರಿತ ಕೇಸ್​ಗೆ ಸಂಬಂಧಪಟ್ಟವನಾಗಿದ್ದಾನೆ.
ನಟ ಸುಶಾಂತ್ ಸಾವಿಗೆ ಸಂಬಂಧಿಸಿದಂತೆ ಡ್ರಗ್ಸ್​ ಪೆಡ್ಲರ್ ​​ರಾಹುಲ್ ವಿಶ್ರಮ್ ಆರೋಪಿ. ಇತರ ಪೆಡ್ಲರ್‌ಗಳೊಂದಿಗೆ ನೇರ ಸಂಪರ್ಕ ಹೊಂದಿದ್ದಾನೆ. ಈತನ ಬಳಿ 1 ಕೆಜಿ ಚರಸ್‌ (ಒಂದು ಬಗೆಯ ಡ್ರಗ್​) ಹಾಗೂ 4.5 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಎನ್​ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಎನ್​ಸಿಬಿ ಈಗಾಗಲೇ ನಟಿ ರಿಯಾ ಚಕ್ರವರ್ತಿ ಹಾಗೂ ಸಹೋದರ ಶೋವಿಕ್ ಚಕ್ರವರ್ತಿ​ ಬಂಧಿಸಿದ್ದು , ಡ್ರಗ್ಸ್ ಲಿಂಕ್ ಕುರಿತ ತನಿಖೆಯನ್ನು ಚುರುಕುಗೊಳಿಸುತ್ತಾದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!