ಹೊಸ ದಿಗಂತ ಆನ್ ಲೈನ್ ಡೆಸ್ಕ್:
ವಿಶ್ವದೆಲ್ಲೆಡೆ ಕೊರೋನಾ ವ್ಯಾಪಕವಾಗಿ ಅಬ್ಬರಿಸಿ ಇದೀಗ ತಿಳಿಯಾಗುತ್ತಿದೆ. ಆದರೆ ಕೆಲ ರಾಷ್ಟ್ರದಲ್ಲಿ ಮತ್ತೆ ಹೆಚ್ಚುತ್ತಿದೆ. ಭಾರತದಲ್ಲೂ ಕೂಡ ಕೊರೋನಾ ಪ್ರಮಾಣ ಇಳಿಮುಖವಾಗುತ್ತಿದೆ. ಆದರೆ ಕೆಲವು ರಾಜ್ಯಗಳಲ್ಲಿ ಮತ್ತೆ ಎರಡನೇ ಅಲೆ ಆರಂಭವಾಗಬಹುದು ಎನ್ನುವ ಭಯವೂ ಕಾಡಲಾರಂಭಿಸಿದೆ.
ಇದೀಗ ಸೋಂಕಿನ ಪ್ರಮಾಣ ವಿಶ್ವದ ಕೆಲ ರಾಷ್ಟ್ರಗಳಲ್ಲಿ ಹೆಚ್ಚಲಾರಂಭಿಸಿದೆ ಈ ಹಿನ್ನೆಲೆಯಲ್ಲಿ ಯುರೋಪಿಯನ್ ದೇಶಗಳು ಸೇರಿ ಅನೇಕ ದೇಶಗಳಲ್ಲಿ ಈಗಾಗಲೇ ಲಾಕ್ಡೌನ್ ಜಾರಿ ಮಾಡಲಾಗಿದೆ.
ದಕ್ಷಿಣ ಆಸ್ಟ್ರೇಲಿಯಾ ಕಟ್ಟುನಿಟ್ಟಿನ ಲಾಕ್ಡೌನ್ ಜಾರಿಗೊಳಿಸಿದ್ದು,ಆರು ದಿನಗಳ ಕಾಲ ಲಾಕ್ಡೌನ್ ಘೋಷಿಸಿದೆ. ಇಲ್ಲಿ ಅಗತ್ಯ ಕೆಲಸಗಳಿಗೆ ಪ್ರತಿ ಮನೆಯಿಂದ ಒಬ್ಬರಿಗೆ ಮಾತ್ರ ಹೊರಬರಲು ಅವಕಾಶ. ನಾಯಿಯನ್ನು ವಾಕಿಂಗ್ ಕೂಡ ಕರೆದುಕೊಂಡು ಹೋಗುವಂತಿಲ್ಲ. ಶಾಲೆ, ಕಾಲೇಜು, ಕೆಫೆ ಎಲ್ಲವೂ ಬಂದ್. ಮದುವೆ, ಸಮಾರಂಭ, ಸಭೆಗಳಿಗೆ ಸಂಪೂರ್ಣ ಬ್ರೇಕ್ ಹಾಕಲಾಗಿದೆ.