Tuesday, September 22, 2020
Tuesday, September 22, 2020

Latest Posts

 ಔರಾದ್-ಬೀದರ ರಸ್ತೆ ದುರಸ್ತಿಗೆ 1.10 ಕೋಟಿ ರೂ. ಪ್ರಸ್ತಾವನೆ: ಸಚಿವ ಪ್ರಭು ಚವ್ಹಾಣ್

ಬೀದರ:  ಬೀದರ-ಔರಾದ ರಸ್ತೆ ಸರಿಪಡಿಸಲು 1.10 ಕೋಟಿ ರೂ.ಗಳು ಹಾಗೂ ಕೌಠಾ ಸೇತುವೆ ದುರಸ್ತಿಗೆ 2 ಕೋಟಿ ರೂ.ಗಳ ಪ್ರಸ್ತಾವನೆಯನ್ನು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಲಾಗಿದೆ ಎಂದು ಪಶು ಸಂಗೋಪನೆ, ವಕ್ಫ್,...

ಕೃಷಿ ವಿಧೇಯಕದಿಂದ ದೇಶದ ರೈತರ ಬಲ ಮತ್ತಷ್ಟು ಹೆಚ್ಚಳ: ಬಿಹಾರ ಸಿಎಂ ನಿತೀಶ್ ಕುಮಾರ್

ಪಾಟ್ನಾ: ಕೇಂದ್ರ ಸರ್ಕಾರದ ಜಾರಿಗೊಳಿಸಿದ ಕೃಷಿ ವಿಧೇಯಕ ದೇಶದ ಕೃಷಿ ವಲಯದ ಚಹರೆಯನ್ನು ಬದಲಿಸಲಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ ಕೃಷಿ ವಿಧೇಯಕಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇಂದು ಬಿಹಾರದಲ್ಲಿ...

ಕಳೆದ ನಾಲ್ಕು ವರ್ಷಗಳಲ್ಲಿ 2,120 ಪಾಕಿಸ್ತಾನಿ, 188 ಅಫ್ಘಾನಿಸ್ತಾನಿ, 99 ಬಾಂಗ್ಲಾದೇಶಿ ಪ್ರಜೆಗಳಿಗೆ ಭಾರತದ ಪೌರತ್ವ!

ಹೊಸದಿಲ್ಲಿ: ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ 2,120 ಪಾಕಿಸ್ತಾನಿ, 188 ಅಫ್ಘಾನಿಸ್ತಾನಿ ಮತ್ತು 99 ಬಾಂಗ್ಲಾದೇಶಿ ಪ್ರಜೆಗಳಿಗೆ ಭಾರತದ ಪೌರತ್ವ ನೀಡಲಾಗಿದೆ ಎಂದು ಕೇಂದ್ರ ಸರಕಾರ ಸೋಮವಾರ ರಾಜ್ಯಸಭೆಗೆ ಮಾಹಿತಿ ನೀಡಿದೆ. 2017ರಿಂದ ಈ...

ಮೌನಮುರಿದ ಅನಿವಾಸಿ ಭಾರತೀಯ ಉದ್ಯಮಿ ಡಾ. ಬಿ.ಆರ್.ಶೆಟ್ಟಿ: ಮತ್ತೆ ಬರಲಿದ್ದೇನೆ ಗೆದ್ದು ಮೇಲೆದ್ದು!

sharing is caring...!

ದುಬೈ: ಅಂತಾರಾಷ್ಟ್ರೀಯ ಖ್ಯಾತಿಯ ಅನಿವಾಸಿ ಭಾರತೀಯ ಉದ್ಯಮಿ ಡಾ. ಬಿ.ಆರ್.ಶೆಟ್ಟಿ ಅವರು ತಮ್ಮ ಮತ್ತು ತಮ್ಮ ಸಂಸ್ಥೆಯ ವಿರುದ್ಧ ಕೇಳಿಬಂದಿರುವ ಆರೋಪಗಳ ಕುರಿತಂತೆ ಇದೀಗ ಮೌನ ಮುರಿದಿದ್ದಾರೆ.
ಯುಕೆ ಮತ್ತು ಯುಎಇಯ ಸಂಬಂಧ ಪಟ್ಟ ಇಲಾಖೆಗಳು ಮತ್ತು ತನಿಖೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ತಾವು ಈ ವರೆಗೆ ಮೌನ ವಹಿಸಿದ್ದು, ಇದೀಗ ತಮ್ಮ ಸ್ವಂತ ಕಾನೂನು ಮತ್ತು ಫೊರೆನ್ಸಿಕ್ ಇನ್‌ವೆಸ್ಟಿಗೇಶನ್‌ಗಳು ಕೆಲವು ಅಂಶಗಳನ್ನು ಗುರುತಿಸಲು ಶಕ್ತವಾಗಿರುವ ಕಾರಣ ಈ ಬಗ್ಗೆ ಸ್ಪಷ್ಟನೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ. ಇದರಂತೆ, ತಮ್ಮ ಎನ್‌ಎಂಸಿ ಹೆಲ್ತ್ ಮತ್ತು ಇತರ ತಮ್ಮ ಕೆಲವು ಖಾಸಗಿ ಕಂಪೆನಿಗಳಲ್ಲಿ ಈಗಿನ ಮತ್ತು ಹಿಂದೆ ಕೆಲಸ ಮಾಡಿದ್ದ ಸಣ್ಣ ಗುಂಪೊಂದರಿಂದ ಕೆಲವು ಗಂಭೀರ ವಂಚನೆ ಮತ್ತು ಪ್ರಮಾದಗಳು ನಡೆದಿರುವುದನ್ನು ಕಂಡುಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಲಂಡನ್ -ಲೀಸ್ಟೆಡ್ ಕಂಪೆನಿಗಳಲ್ಲಿ ನಡೆದ ಕೆಲವು ವ್ಯವಹಾರಗಳ ಬಗ್ಗೆ ಸಲಹೆಗಾರರು ನೀಡಿದ ಸುಳಿವಿನಂತೆ ನಡೆಸಲಾದ ಪ್ರಾಥಮಿಕ ತನಿಖೆಯೊಂದರಲ್ಲಿ ಕೆಲವು “ಗಂಭೀರ ವಂಚನೆ ಮತ್ತು ಪ್ರಮಾದಗಳು”ನಡೆದಿರುವ ಸುಳಿವು ಲಭಿಸಿದೆ. ಈ ಬಗ್ಗೆ ಎಲ್ಲ ಸಂಬಂಧಿತ ಮಂಡಳಿಗಳಲ್ಲಿ ಕಂಡುಕೊಳ್ಳಲಾದ ದಾಖಲೆಗಳು ಮತ್ತು ಮಾಹಿತಿಗಳು ಹಾಗೂ ಸಂಬಂಧಪಟ್ಟ ಕಾನೂನು ಅನುಷ್ಠಾನ ಇಲಾಖೆಗಳ ತನಿಖಾ ವರದಿಗಳಿಂದ ಇದು ವ್ಯಕ್ತವಾಗಿದೆ ಎಂಬುದಾಗಿ ಉಡುಪಿ ಮೂಲದ ಡಾ. ಭಾವಗುತ್ತು ರಘುರಾಮ ಶೆಟ್ಟಿ ಅವರು ಹೇಳಿದ್ದಾರೆ.
10 ಬಿ. ಡಾ. ಮಾರುಕಟ್ಟೆ ಮೌಲ್ಯ ಹೊಂದಿರುವ ಎನ್‌ಎಂಸಿಯಲ್ಲಿನ ವ್ಯವಹಾರವನ್ನು ವಂಚನೆಯ ಆರೋಪಗಳು ಬಂದ ಬಳಿಕ ಅಮಾನತುಗೊಳಿಸಲಾಗಿದ್ದು, ಅಲ್ಲಿ 4 ಬಿ.ಡಾ.ಗೂ ಅಧಿಕ ಅಜ್ಞಾತ ಸಾಲ ಇರುವುದು ಪತ್ತೆಯಾಗಿ ಒಟ್ಟು ಸಾಲದ ಮೊತ್ತ 6.6 ಬಿ.ಡಾ. ಗೇರುವಂತೆ ಮಾಡಿದೆ ಎಂದು ಅವರು ಗಮನ ಸೆಳೆದಿದ್ದಾರೆ.
ತಮ್ಮ ಹೆಸರಿನಲ್ಲಿ ಹಲವು ಮೋಸದ ವ್ಯವಹಾರಗಳನ್ನು ನಡೆಸಿರುವುದು ಕಂಡುಬಂದಿದೆ. ಆದರೆ ಇಂತಹ ವ್ಯವಹಾರಕ್ಕೆ ತಾವು ಯಾರಿಗೂ ಅಧಿಕಾರ ನೀಡಿರಲಿಲ್ಲ. ಈ ವ್ಯವಹಾರ ತಮ್ಮ ಗಮನಕ್ಕೆ ಬಂದೂ ಇಲ್ಲ. ಇಂತಹ ವಂಚನೆಯಲ್ಲಿ ತಮ್ಮ ಹೆಸರಿನಲ್ಲಿ ನಕಲಿ ಖಾತೆಗಳು, ಸಾಲಗಳು, ವೈಯಕ್ತಿಕ ಖಾತ್ರಿಗಳು, ಸುಳ್ಳು ಪವರ್ ಆಫ್ ಅಟಾರ್ನಿ, ಚೆಕ್ಕುಗಳು, ಬ್ಯಾಂಕ್ ವರ್ಗಾವಣೆಗಳು ನಡೆದಿದ್ದು, ಇದು ತಮ್ಮ ಹೆಸರಿನಲ್ಲಿ ನಡೆದಿರುವುದು ಕಂಡುಬಂದಿದೆ. ಹಲವೆಡೆ ತಮ್ಮ ಪೋರ್ಜರಿ ಸಹಿ ಬಳಸಿರುವುದು ಕೂಡಾ ಪತ್ತೆಯಾಗಿದೆ. ಕೆಲವು ಕಂಪೆನಿಗಳನ್ನು ತಮ್ಮ ಹೆಸರಿನಲ್ಲಿ ಸೃಷ್ಟಿಸಲಾಗಿದೆ. ತಮ್ಮ ಕೆಲವು ಕಂಪೆನಿಗಳ ಹಣಕಾಸು ವರದಿಗಳನ್ನು ತಪ್ಪಾಗಿ ಮತ್ತು ಜನರ ದಿಕ್ಕು ತಪ್ಪಿಸುವ ರೀತಿಯಲ್ಲಿ ನೀಡಿರುವ ಕೃತ್ಯಗಳೂ ಕಂಡುಬಂದಿವೆ. ಆದರೆ ಈ ಬಗ್ಗೆ ತಾವು ಯಾರಿಗೂ ಅಧಿಕಾರ ನೀಡಿಲ್ಲ. ಇದೊಂದು ಯೋಜಿತ ವಂಚನೆಯ ಕೃತ್ಯವಾಗಿದೆ.
ತಾವು ಯುಎಇಯಲ್ಲಿ ಸ್ಥಾಪಿಸಿ ಅನಂತರ ಅದಿಂದು ಎಲ್ಲೆಡೆಗೆ ವ್ಯಾಪಿಸಿ ಕಳೆದ 45 ವರ್ಷಗಳಿಂದ ಜನಮನ್ನಣೆ ಗಳಿಸಲು ಮತ್ತು ಸಾವಿರಾರು ಜನರಿಗೆ ಸೇವೆ ಸಲ್ಲಿಸಲು ಕಠಿಣ ದುಡಿಮೆ, ಬದ್ಧತೆ, ಶಿಸ್ತು, ಸಮಗ್ರತೆ ಮತ್ತು ವಿಶ್ವಾಸಾರ್ಹತೆಗಳೇ ಕಾರಣ. ಆದರೆ ಇಂದು ತಾವು ಯಾರಲ್ಲಿ ವಿಶ್ವಾಸ ಇಟ್ಟಿದ್ದೆನೋ ಅಂತಹವರೇ ಕೆಲವರು ಈ ರೀತಿ ವಂಚನೆ ಎಸಗಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಕಂಪೆನಿಗಳಲ್ಲಿ ಪ್ರಾಮಾಣಿಕ ಮತ್ತು ನಿಷ್ಠೆಯಿಂದ ದುಡಿಯುತ್ತಿರುವ ಸಾವಿರಾರು ಮಂದಿ ಕೆಲಸಗಾರರಿಗೆ, ಸಾರ್ವಜನಿಕ ಆರೋಗ್ಯದ ವಿಷಯದಲ್ಲಿ ಎದುರಾಗಿರುವ ಇಂದಿನ ಕಠಿಣ ಸಂದರ್ಭದಲ್ಲೇ ಅನಿಶ್ಚಿತತೆ ಕಾಡುವಂತಾಗಿರುವುದು ತಮಗೆ ತೀವ್ರ ವಿಷಾದ ಹಾಗೂ ನೋವುಂಟು ಮಾಡಿದೆ. ಹಾಗೆಯೇ ತಮ್ಮ ಜೊತೆ ದೀರ್ಘಕಾಲದಿಂದ ಪಾಲುದಾರರಾಗಿರುವವರಿಗೆ, ಶೇರುದಾರರಿಗೆ ಮತ್ತು ಇತರ ಸಹಕಾರಿಗಳಿಗೆ ಆಗಿರುವ ಹಾನಿ ಬಗೆಗೂ ತಮಗೆ ತೀವ್ರ ದುಃಖವಿದೆ. ತಾವು ಕಾನೂನು ಮತ್ತು ತನಿಖೆಗೆ ಗೌರವ ನೀಡಿ ಈ ವರೆಗೆ ಮೌನ ವಹಿಸಿದ್ದು, ಇದರಿಂದ ತಮ್ಮ ವರ್ಚಸ್ಸಿಗೆ ಧಕ್ಕೆ ಉಂಟಾಗಿರುವ ಕಾರಣ ಇದೀಗ ಹೇಳಿಕೆ ನೀಡಬೇಕಾಗಿ ಬಂದಿದೆ. ತಮ್ಮ ಮತ್ತು ಸಂಸ್ಥೆಯ ವಿರುದ್ಧ ನಡೆದ ಈ ಎಲ್ಲ ವಂಚನೆಗಳ ವಿರುದ್ಧ ಪೂರ್ಣ ಮಾಹಿತಿಗಳನ್ನು ಶೀಘ್ರವೇ ತಿಳಿಯಲು ಶಕ್ತರಾಗಲಿದ್ದು, ಅತಿ ಶೀಘ್ರದಲ್ಲೇ ತಾವು ಎಲ್ಲ ಕಾನೂನು ಕ್ರಮಗಳನ್ನು ಮತ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳಲಿದ್ದು, ಸತ್ಯದ ಆಧಾರದಲ್ಲಿ ಗೆದ್ದು ಮೇಲೆದ್ದು ಬರಲಿದ್ದೇನೆ ಎಂಬುದಾಗಿ ಅವರು ‘ಹೊಸದಿಗಂತ’ಕ್ಕೆ ತಿಳಿಸಿದ್ದಾರೆ.
ಕಳೆದ ಕೆಲವು ಸಮಯದಿಂದ ಕೆಲವು ಮಾಧ್ಯಮಗಳಲ್ಲಿ ಡಾ. ಬಿ.ಆರ್.ಶೆಟ್ಟಿ ಮತ್ತು ಅವರ ಸಂಸ್ಥೆಗಳ ಕುರಿತಂತೆ ಬರುತ್ತಿರುವ ವರದಿಗಳ ಹಿನ್ನೆಲೆಯಲ್ಲಿ ಅವರ ಈ ಹೇಳಿಕೆ ಬಂದಿದೆ. ಕಳೆದ ನಾಲ್ಕು ದಶಕಗಳಲ್ಲಿ ಅವರ ಸಂಸ್ಥೆ ಕೊಲ್ಲಿ ದೇಶಗಳಲ್ಲಿ ಸಾವಿರಾರು ಮಂದಿಗೆ ಉದ್ಯೋಗ ಮತ್ತು ಲಕ್ಷಾಂತರ ಮಂದಿಗೆ ಆರೋಗ್ಯ ಸೇವೆ ಒದಗಿಸುತ್ತಾ ಬಂದು ಖ್ಯಾತವಾಗಿರುವುದಿಲ್ಲಿ ಉಲ್ಲೇಖನೀಯ.

Latest Posts

 ಔರಾದ್-ಬೀದರ ರಸ್ತೆ ದುರಸ್ತಿಗೆ 1.10 ಕೋಟಿ ರೂ. ಪ್ರಸ್ತಾವನೆ: ಸಚಿವ ಪ್ರಭು ಚವ್ಹಾಣ್

ಬೀದರ:  ಬೀದರ-ಔರಾದ ರಸ್ತೆ ಸರಿಪಡಿಸಲು 1.10 ಕೋಟಿ ರೂ.ಗಳು ಹಾಗೂ ಕೌಠಾ ಸೇತುವೆ ದುರಸ್ತಿಗೆ 2 ಕೋಟಿ ರೂ.ಗಳ ಪ್ರಸ್ತಾವನೆಯನ್ನು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಲಾಗಿದೆ ಎಂದು ಪಶು ಸಂಗೋಪನೆ, ವಕ್ಫ್,...

ಕೃಷಿ ವಿಧೇಯಕದಿಂದ ದೇಶದ ರೈತರ ಬಲ ಮತ್ತಷ್ಟು ಹೆಚ್ಚಳ: ಬಿಹಾರ ಸಿಎಂ ನಿತೀಶ್ ಕುಮಾರ್

ಪಾಟ್ನಾ: ಕೇಂದ್ರ ಸರ್ಕಾರದ ಜಾರಿಗೊಳಿಸಿದ ಕೃಷಿ ವಿಧೇಯಕ ದೇಶದ ಕೃಷಿ ವಲಯದ ಚಹರೆಯನ್ನು ಬದಲಿಸಲಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ ಕೃಷಿ ವಿಧೇಯಕಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇಂದು ಬಿಹಾರದಲ್ಲಿ...

ಕಳೆದ ನಾಲ್ಕು ವರ್ಷಗಳಲ್ಲಿ 2,120 ಪಾಕಿಸ್ತಾನಿ, 188 ಅಫ್ಘಾನಿಸ್ತಾನಿ, 99 ಬಾಂಗ್ಲಾದೇಶಿ ಪ್ರಜೆಗಳಿಗೆ ಭಾರತದ ಪೌರತ್ವ!

ಹೊಸದಿಲ್ಲಿ: ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ 2,120 ಪಾಕಿಸ್ತಾನಿ, 188 ಅಫ್ಘಾನಿಸ್ತಾನಿ ಮತ್ತು 99 ಬಾಂಗ್ಲಾದೇಶಿ ಪ್ರಜೆಗಳಿಗೆ ಭಾರತದ ಪೌರತ್ವ ನೀಡಲಾಗಿದೆ ಎಂದು ಕೇಂದ್ರ ಸರಕಾರ ಸೋಮವಾರ ರಾಜ್ಯಸಭೆಗೆ ಮಾಹಿತಿ ನೀಡಿದೆ. 2017ರಿಂದ ಈ...

ಕಾಸರಗೋಡು ಜಿಲ್ಲೆಯಲ್ಲಿ ಅನ್ ಲಾಕ್-4 ಜಾರಿಗೆ: ಸಹಜ ಸ್ಥಿತಿಯತ್ತ ಜನಜೀವನ

ಕಾಸರಗೋಡು: ಜಿಲ್ಲೆಯಲ್ಲಿ ಕೊರೋನಾ ಹರಡುವಿಕೆಯ ಆತಂಕ ನೆಲೆಗೊಂಡಿರುವಂತೆಯೇ ಇನ್ನಷ್ಟು ಸಡಿಲಿಕೆ ಜಾರಿಗೆ ಬರುವುದರೊಂದಿಗೆ ಜನಜೀವನ ಸಹಜ ಸ್ಥಿತಿಗೆ ಮರಳತೊಡಗಿದೆ. ದೇಶದಲ್ಲಿ ಅನ್ ಲಾಕ್-4 ಸಡಿಲಿಕೆ ಸೋಮವಾರದಿಂದ ಜಾರಿಗೆ ಬಂದಿದೆ. ಅದರಂತೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ 100...

Don't Miss

 ಔರಾದ್-ಬೀದರ ರಸ್ತೆ ದುರಸ್ತಿಗೆ 1.10 ಕೋಟಿ ರೂ. ಪ್ರಸ್ತಾವನೆ: ಸಚಿವ ಪ್ರಭು ಚವ್ಹಾಣ್

ಬೀದರ:  ಬೀದರ-ಔರಾದ ರಸ್ತೆ ಸರಿಪಡಿಸಲು 1.10 ಕೋಟಿ ರೂ.ಗಳು ಹಾಗೂ ಕೌಠಾ ಸೇತುವೆ ದುರಸ್ತಿಗೆ 2 ಕೋಟಿ ರೂ.ಗಳ ಪ್ರಸ್ತಾವನೆಯನ್ನು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಲಾಗಿದೆ ಎಂದು ಪಶು ಸಂಗೋಪನೆ, ವಕ್ಫ್,...

ಕೃಷಿ ವಿಧೇಯಕದಿಂದ ದೇಶದ ರೈತರ ಬಲ ಮತ್ತಷ್ಟು ಹೆಚ್ಚಳ: ಬಿಹಾರ ಸಿಎಂ ನಿತೀಶ್ ಕುಮಾರ್

ಪಾಟ್ನಾ: ಕೇಂದ್ರ ಸರ್ಕಾರದ ಜಾರಿಗೊಳಿಸಿದ ಕೃಷಿ ವಿಧೇಯಕ ದೇಶದ ಕೃಷಿ ವಲಯದ ಚಹರೆಯನ್ನು ಬದಲಿಸಲಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ ಕೃಷಿ ವಿಧೇಯಕಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇಂದು ಬಿಹಾರದಲ್ಲಿ...

ಕಳೆದ ನಾಲ್ಕು ವರ್ಷಗಳಲ್ಲಿ 2,120 ಪಾಕಿಸ್ತಾನಿ, 188 ಅಫ್ಘಾನಿಸ್ತಾನಿ, 99 ಬಾಂಗ್ಲಾದೇಶಿ ಪ್ರಜೆಗಳಿಗೆ ಭಾರತದ ಪೌರತ್ವ!

ಹೊಸದಿಲ್ಲಿ: ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ 2,120 ಪಾಕಿಸ್ತಾನಿ, 188 ಅಫ್ಘಾನಿಸ್ತಾನಿ ಮತ್ತು 99 ಬಾಂಗ್ಲಾದೇಶಿ ಪ್ರಜೆಗಳಿಗೆ ಭಾರತದ ಪೌರತ್ವ ನೀಡಲಾಗಿದೆ ಎಂದು ಕೇಂದ್ರ ಸರಕಾರ ಸೋಮವಾರ ರಾಜ್ಯಸಭೆಗೆ ಮಾಹಿತಿ ನೀಡಿದೆ. 2017ರಿಂದ ಈ...
error: Content is protected !!