ಕನ್ನಡ ಕಿರುತೆರೆ ಪ್ರೇಕ್ಷಕರನ್ನು ಹೆಚ್ಚು ಮನರಂಜಿಸಿದ ಶೋ ಮಜಾ ಟಾಕೀಸ್ ಯಶಸ್ವಿಯಾಗಿ ಎಪಿಸೋಡ್ಗಳನ್ನು ಪೂರೈಸಿದೆ.
ಆದರೆ ಹಲವು ತಿಂಗಳಿಂದ ಪ್ರೇಕ್ಷಕರು ಅದನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಅಂಥವರಿಗೆಲ್ಲ ಸೃಜನ್ ಲೋಕೇಶ್ ಕಡೆಯಿಂದ ಸಿಹಿ ಸುದ್ದಿ ಕೇಳಿಬಂದಿದೆ. ಒಳ್ಳೆಯ ಪ್ರತಿಕ್ರಿಯನ್ನೇ ಪಡೆದುಕೊಳ್ಳುತ್ತಿದ್ದ ’ಮಜಾ ಟಾಕೀಸ್’ ಕಾರ್ಯಕ್ರಮವನ್ನು ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ನಿಲ್ಲಿಸಲಾಯಿತು. ಆಗ ಅನೇಕ ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದು ಸುಳ್ಳಲ್ಲ. ಕುರಿ ಪ್ರತಾಪ್, ಸೃಜನ್ ಲೋಕೇಶ್, ಶ್ವೇತಾ ಚೆಂಗಪ್ಪ, ಪವನ್, ಇಂದ್ರಜಿತ್ ಲಂಕೇಶ್ ಮುಂತಾದವರ ಜುಗಲ್ಬಂಧಿಯಿಂದಾಗಿ ಮಜಾ ಟಾಕೀಸ್ಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿತ್ತು. ಮತ್ತೆ ಈ ಕಾರ್ಯಕ್ರಮ ಬರಲಿದೆಯೇ ಎಂಬ ಪ್ರಶ್ನೆ ಎಲ್ಲರ ಮನದಲ್ಲೂ ಇತ್ತು. ಅದಕ್ಕೀಗ ಉತ್ತರ ಸಿಕ್ಕಿದೆ. ಈ ಸುದ್ದಿ ಕೇಳಿ ಕಿರುತೆರೆ ಪ್ರೇಕ್ಷಕರು ಖುಷಿ ಆಗುವುದು ಗ್ಯಾರಂಟಿ. ಮಜಾ ಟಾಕೀಸ್ ಹೊಸ ಸೀಸನ್ ಬಗ್ಗೆ ಇಲ್ಲಿದೆ ಅಚ್ಚರಿಯ ಮಾಹಿತಿ
’ಮಜಾ ಟಾಕೀಸ್’ ಹೊಸ ಸೀಸನ್ ಆರಂಭಿಸುತ್ತಾರೆ ಎಂಬ ಬಗ್ಗೆ ಈ ಹಿಂದೆಯೇ ಸುದ್ದಿ ಕೇಳಿಬಂದಿತ್ತಾದರೂ ಅಧಿಕೃತವಾಗಿ ಮಾಹಿತಿ ಹೊರಬಿದ್ದಿರಲಿಲ್ಲ. ಇತ್ತೀಚೆಗೆ ಲಾಕ್ಡೌನ್ನಿಂದಾಗಿ ಅನೇಕ ಟಿವಿ ಕಾರ್ಯಕ್ರಮಗಳು ಸ್ಥಗಿತಗೊಂಡಿದ್ದವು. ಹಲವು ತಂತ್ರಜ್ಞರು ಮತ್ತು ಕಲಾವಿದರನ್ನು ಇಟ್ಟುಕೊಂಡು ಶೂಟಿಂಗ್ ಮಾಡುವುದೇ ಕಷ್ಟವಾಯಿತು.. ’ಮಜಾ ಟಾಕೀಸ್’ ಹೊಸ ಸೀಸನ್ಗೆ ಅವರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಈಗಾಗಲೇ ಶೂಟಿಂಗ್ ಕೂಡ ಆರಂಭಿಸಿದ್ದಾರೆ. ಶೀಘ್ರದಲ್ಲೇ ಟಿವಿಯಲ್ಲಿ ಶೋ ಪ್ರಸಾರವಾಗಲಿದೆ.