ಮತ್ತೆ ಬಾಗಿಲು ತೆರೆಯಲಿದೆ ಮೈಸೂರಿನ ಚಾಮರಾಜೇಂದ್ರ ಮೃಗಾಲಯ: ಪುನರಾರಂಭಕ್ಕೆ ಮಾರ್ಗಸೂಚಿ

0
73
ಮೈಸೂರು: ಅರಮನೆ ನಗರಿ  ಮೈಸೂರಿನಲ್ಲಿರುವ ಇತಿಹಾಸ ಪ್ರಸಿದ್ಧ ಚಾಮರಾಜೇಂದ್ರ ಮೃಗಾಲಯ ಪುನರಾರಂಭಕ್ಕೆ ಮೃಗಾಲಯ ಪ್ರಾಧಿಕಾರ  ಮಾರ್ಗಸೂಚಿ ಹೊರಡಿಸಿದೆ.
ಹೀಗಾಗಿ  ಕೆಲವೇ ದಿನಗಳಲ್ಲಿ ನಗರದ ಚಾಮರಾಜೇಂದ್ರ ಮೃಗಾಲಯ ಪುನರಾರಂಭವಾಗಲಿದೆ. ಈ ನಿಟ್ಟಿನಲ್ಲಿ ಕೊರೋನಾ ಸೋಂಕು ಹರಡದಂತೆ ಕ್ರಮವಹಿಸುವಂತೆ ಸೂಚನೆ ಬಂದಿದೆ.
ಕೊರೋನಾ ವೈರಸ್ ಹರಡುವಿಕೆ ತಡೆಯಲು ಜಾರಿಗೊಳಿಸಲಾಗಿದ್ದ ಲಾಕ್‌ಡೌನ್‌ನ್ನು ಸಡಿಲಗೊಳಿಸಲಾಗಿದೆ. ಈಗಾಗಲೇ ಜಿಲ್ಲೆಗಳ ಗಡಿಗಳು, ರಾಜ್ಯಗಳ ಗಡಿಗಳು ತೆರೆಯಲ್ಪಟ್ಟು ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ರೈಲುಗಳು, ಅಂತರ್ ರಾಜ್ಯ ವಿಮಾನ ಹಾರಾಟಗಳು ಆರಂಭವಾಗಲಿದೆ. ಇದರಿಂದಾಗಿ ಮತ್ತೆ ಪ್ರವಾಸೋದ್ಯಮ ಚಟುವಟಿಕೆಗಳು ಪುನರ್ ಆರಂಭವಾಗಲಿದೆ. ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿರುವ ಮೈಸೂರಿನ  ಮೃಗಾಲಯ ಮತ್ತೆ ಪ್ರವಾಸಿಗರಿಗೆ ತೆರೆದುಕೊಳ್ಳಲಿದೆ. ಈ ಮೃಗಾಲಯಕ್ಕೆ ಸರ್ಕಾರ ಯಾವುದೇ ಅನುದಾನವನ್ನು ನೀಡುತ್ತಿಲ್ಲ, ಪ್ರವಾಸಿಗರ ಪ್ರವೇಶ ಶುಲ್ಕ ಮತ್ತಿತರರ ಆದಾಯದಿಂದಲೇ ಮೃಗಾಲಯವನ್ನು ನಡೆಸಬೇಕಾಗಿದೆ. ಆದರೆ ಕಳೆದ ಎರಡು ತಿಂಗಳಿAದ ಕೊರೋನಾ ವೈರಸ್ ಕಾರಣದಿಂದ ಮೃಗಾಲಯವನ್ನು ಬಂದ್ ಮಾಡಲಾಗಿದೆ. ಇದರಿಂದಾಗಿ ಆದಾಯಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಮೃಗಾಲಯ ನಡೆಸಬೇಕಾದರೆ ಪ್ರತಿ ತಿಂಗಳು ೨ ಕೋಟಿ ರೂ ಬೇಕು. ಅಷ್ಟು ಹಣ ಖರ್ಚಾಗುತ್ತದೆ. ಆದರೆ ಎರಡು ತಿಂಗಳಿAದ ಮೃಗಾಲಯವನ್ನು ಬಂದ್ ಮಾಡಿರುವ ಕಾರಣ ಆರ್ಥಿಕ ಸಂಕಷ್ಟ ಎದುರಾಗಿದೆ. ಹೀಗಾಗಿ ಮೃಗಾಲಯದ ನಿರ್ವಹಣೆ ಮಾಡುವುದಕ್ಕಾಗಿ ಮತ್ತೆ ಪ್ರವಾಸಿಗರಿಗೆ ಬಾಗಿಲು ತೆರೆಯುವುದು ಅನಿವಾರ್ಯವಾಗಿದೆ. ಕೇವಲ ಮೃಗಾಲಯಕ್ಕೆ ಭೇಟಿ ನೀಡುವ ಪ್ರವಾಸಿಗರನ್ನೇ ನಂಬಿರುವ ನೂರಾರು ಮಂದಿ ಸಣ್ಣ ಪುಟ್ಟ ವ್ಯಾಪಾರಿಗಳೂ ಸಂಕಷ್ಟದಲ್ಲಿದ್ದಾರೆ. ಅವರೂ ಜೀವನ ನಡೆಸುವುದಕ್ಕೂ ಅವಕಾಶ ಮಾಡಿಕೊಡಬೇಕಾಗಿದೆ. ಹಾಗಾಗಿ ಮೃಗಾಲಯವನ್ನು ಮತ್ತೆ ತೆರೆಯದೆ ವಿಧಿಯಿಲ್ಲ ಎನ್ನುವಂತಾಗಿದೆ. ಹಾಗಾಗಿ  ಮೃಗಾಲಯ ವಿವಿಧ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಮೃಗಾಲಯದಲ್ಲಿ ಟಿಕೆಟ್ ತಗೊಳ್ಳುವ ವೇಳೆ, ಒಳಗೆ ಸಾಗುವ ವೇಳೆ ಯಾವ ರೀತಿ ಇರಬೇಕೆಂದು ತಿಳಿಸಿದೆ. ಮೃಗಾಲಯದೊಳಗೆ ಪ್ರವೇಶಿಸುವವರಿಗೆ ಥರ್ಮಲ್ ಸ್ಕಿçÃನಿಂಗ್ ಮಾಡಲಾಗತ್ತೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಕೆಮ್ಮು, ಜ್ವರ, ಶೀತದ ಲಕ್ಷಣ ಇರುವವರಿಗೆ  ಮೃಗಾಲಯದೊಳಕ್ಕೆ ಪ್ರವೇಶವಿಲ್ಲ. ೬೫ವರ್ಷಕ್ಕಿಂತ ಮೇಲ್ಪಟ್ಟ ವೃದ್ಧರಿಗೆ ಮೃಗಾಲಯದೊಳಗೆ ಪ್ರವೇಶ ನಿರಾಕರಣೆ, ಫೇಸ್ ಮಾಸ್ಕ್ ಕಡ್ಡಾಯ, ಮೆಡಿಕೇಟೆಡ್ ಫೂಟ್ ಮ್ಯಾಟ್ ಮೂಲಕವೇ ಹಾದು ಹೋಗಬೇಕು. ದೇಹದ ತಾಪಮಾನ ಕೂಡ ಪರೀಕ್ಷಿಸಲಾಗುತ್ತದೆ. ೧೦ಅಡಿ ಅಂತರ ಕಾಯ್ದುಕೊಳ್ಳಲೇ ಬೇಕು. ಬ್ಯಾರಿಕೇಡ್ ಕೂಡ ಅಳವಡಿಸಲಾಗುತ್ತಿದೆ.
ಯಾವುದೇ ವಸ್ತುಗಳನ್ನು ತಮ್ಮ ಜೊತೆ ಒಯ್ಯುವಂತಿಲ್ಲ, ಲಾಕರ್ ರೂಮ್ ನಲ್ಲಿಯೇ ಇಟ್ಟು ಒಳಗೆ ಹೋಗಬೇಕು. ಮೃಗಾಲಯದ ಆವರಣದಲ್ಲಿ ಎಲ್ಲಿಯೂ ಉಗುಳಬಾರದು. ಪಾನ್ ಮಸಾಲಾ, ಗುಟ್ಕಾಗಳನ್ನು ಆವರಣದೊಳಗೆ ಸೇವಿಸಿ ಉಗುಳಬಾರದು. ಸಂದರ್ಶಕರ ಮೇಲೆ ಸಿಸಿ ಕ್ಯಾಮರಾ ಕಣ್ಗಾವಲಿರಲಿದ್ದು ಎಲ್ಲಾ ಮಾರ್ಗಸೂಚಿಗಳನ್ನು ಪಾಲಿಸುತ್ತಿದ್ದಾರಾ ಇಲ್ಲವಾ ಎಂದು ವೀಕ್ಷಿಸಲಾಗುವುದು. ಉಲ್ಲಂಘಿಸುವವರಿಗೆ  ತಲಾ ೧೦೦೦ರೂ.ದಂಡ ವಿಧಿಸಲಾಗುವುದು ಎಂದು ತಿಳಿಸಿದೆ.
ಮೃಗಾಲಯದ ಸಿಬ್ಬಂದಿಗಳು ಕೂಡ ನೈರ್ಮಲ್ಯವನ್ನು ಕಾಪಾಡಬೇಕು. ನೀಡಿದ ಸಮಯೋಚಿತ ನಿರ್ದೇಶಗಳನ್ನು ಪಾಲಿಸಬೇಕು ಎಂದಿದೆ.
ಜ್ವರ ಶೀತ ಕೆಮ್ಮು ಇದರಿಂದ ಬಳಲುತ್ತಿರುವ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗುವಂತಿಲ್ಲ, ಮೇಲಧಿಕಾರಿಗಳಿಗೆ ತಿಳಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಜೊತೆಗೆ ಫೇಸ್ ಮಾಸ್ಕ್ ಕಡ್ಡಾಯ. ಕೈಗಳನ್ನು ಸ್ಯಾನಿಟೈಸರ್ ಮಾಡಿಕೊಳ್ಳಬೇಕು ಎಂದು ಮಾರ್ಗ ಸೂಚಿಯಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here