Wednesday, June 29, 2022

Latest Posts

ಮತ್ತೆ ಮತ್ತೆ ಡ್ರ್ಯಾಗನ್ ಕ್ಯಾತೆ: ಗಡಿಯಲ್ಲಿ ಗುಂಡಿನ ಮೊರೆತ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಗಲ್ವಾನ್ ಗಡಿ ಘರ್ಷಣೆ ನಡೆದ ಆರು ತಿಂಗಳ ಬಳಿಕ ಇದೀಗ ಸಿಕ್ಕಿಂ ನ ನಾಕು ಲಾ ಗಡಿಯಲ್ಲಿ ಚೀನಾ ಮತ್ತೆ ಕ್ಯಾತೆ ಶುರು ಮಾಡಿದೆ.

ಕಳೆದ ವಾರ ಚೀನಾ ಯೋಧರು ನಕು ಲಾ ಪಾಸ್ ನ ಗಡಿಯಲ್ಲಿ ಭಾರತದೊಳಗೆ ನುಸುಳಲು ಯತ್ನ ನಡೆಸಿದ್ದು, ಈ ವೇಳೆ ಭಾರತ-ಚೀನಾ ಯೋಧರ ನಡುವೆ ಮುಖಾಮುಖಿ ಘರ್ಷಣೆ ಸಂಭವಿಸಿದೆ ಎಂದು ಸೇನೆ ಸೋಮವಾರ ತಿಳಿಸಿದೆ.

ಉಭಯ ರಾಷ್ಟ್ರಗಳ ಸೈನಿಕರ ಘರ್ಷಣೆಯಲ್ಲಿ ನಾಲ್ವರು ಭಾರತೀಯ ಯೋಧರು ಹಾಗೂ 20 ಚೀನಾ ಯೋಧರು ಗಾಯಗೊಂಡಿದ್ದಾರೆ.
2020ರ ಮೇ ತಿಂಗಳಲ್ಲಿ ಲಡಾಕ್ನಲ್ಲಿ ಚೀನಾ ಮತ್ತು ಭಾರತೀಯ ಸೇನೆಯ ನಡುವೆ ಮುಖಾಮುಖಿ ಸಂಘರ್ಷ ನಡೆದ ಬಳಿಕ ಇದೀಗ ಈ ಸಂಘರ್ಷ ನಡೆದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss