Thursday, August 18, 2022

Latest Posts

ಮತ್ತೆ ಮಹಾಮಾರಿ ರುದ್ರನರ್ತನ: ವುಹಾನ್‌ನಲ್ಲಿ 10 ಸಾವಿರ ಮನೆ ಸೀಲ್‌ಡೌನ್!

ವಾಷಿಂಗ್ಟನ್: ಎರಡನೆ ಸುತ್ತಿನ ಕೊರೋನಾ ಸೋಂಕಿನಿಂದ ವುಹಾನ್ ಮತ್ತೆ ತತ್ತರಿಸಿದೆ. ಇಲ್ಲಿನ ಸಾವಿರಾರು ಮನೆಗಳನ್ನು ಸೀಲ್‌ಡೌನ್ ಮಾಡಲಾಗಿದೆ.

ಮೂಲಗಳ ಪ್ರಕಾರ ವುಹಾನ್ ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿ ಕೊರೋನಾ ಮತ್ತೆ ವಿಜೃಂಭಿಸಿದ್ದು ಸುಮಾರು 5 ಸಾವಿರದಿಂದ 10 ಸಾವಿರ ಮನೆಗಳನ್ನು ಲೋಹದ ಮುದ್ರೆಗಳಿಂದ ಸೀಲ್ ಮಾಡಿ ನರಪಿಳ್ಳೆಯೂ ಹೊರಗೆ ಬಾರದಂತೆ ಸ್ಥಳೀಯ ಆಡಳಿತ ಬಿಗಿ ಬಂಧನ ಹಾಕಿದೆ. ಇನ್ನೂ ಕೆಲವರನ್ನು ಇಲ್ಲಿನ ಅಧಿಕಾರಿಗಳು ಬಂಧಿಸಿದ್ದು ಈ ಬಗ್ಗೆ ಯಾರೂ ತುಟಿಪಿಟಕ್ ಅನ್ನದಂತೆ ಬೆದರಿಕೆ ಹಾಕಿದ್ದಾರೆನ್ನಲಾಗಿದೆ.

ಚೀನಾದಿಂದ ಕೊರೋನಾ ಮಹಾಮಾರಿ ಶಾಶ್ವತವಾಗಿ ತೊಲಗಿತೆಂದೂ, ಇನ್ನು ತನಗೇನೂ ಇದರ ಭಯವಿಲ್ಲವೆಂದು ಜಂಬ ಕೊಚ್ಚುತ್ತಿರುವ ವುಹಾನ್ ನಗರದ ಪ್ರಸ್ತುತ ಸ್ಥಿತಿ, ಗತಿ ಕುರಿತು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಈ ಪತ್ರಿಕೆಯ ವರದಿಗಳ ಪ್ರಕಾರ ಚೀನಾದ ರಿಯಲ್ ಎಸ್ಟೇಟ್, ಸ್ಥಳೀಯ ಬ್ಯಾಂಕ್ ಹಾಗೂ ಸ್ಟಾಕ್ ಮಾರ್ಕೆಟ್ ಸಂಪೂರ್ಣವಾಗಿ ಕುಸಿದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!