Wednesday, August 10, 2022

Latest Posts

ಮತ್ತೊಂದು ದಾಖಲೆ ಬರೆಯಲು ಹೊರಟಿದ್ದಾರೆ ಮಹೇಂದ್ರ ಸಿಂಗ್ ಧೋನಿ.. ಏನು‌ ದಾಖಲೆ?

ಹೊಸದಿಗಂತ ಆನ್ ಲೈನ್ ಡೆಸ್ಕ್:

ಭಾರತ ತಂಡದ ಮಾಜಿ ನಾಯಕ, ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಆಗಿರುವ ಎಂಎಸ್ ಧೋನಿ ಐಪಿಎಲ್ ಇತಿಹಾಸದಲ್ಲಿ ವಿಶೇಷ ದಾಖಲೆ ನಿರ್ಮಿಸಲಿದ್ದಾರೆ.

2021ರ ಋತುವಿನಲ್ಲೂ ಧೋನಿ ಸಿಎಸ್‌ಕೆ ಪರ ಆಡುವ ನಿರೀಕ್ಷೆಯಿದೆ. ಹೀಗಾಗಿ ಐಪಿಎಲ್‌ನಲ್ಲಿ 150 ಕೋಟಿ ರೂ.ಗೂ ಹೆಚ್ಚು ವೇತನ ಪಡೆದ ಮೊದಲ ಆಟಗಾರನಾಗಿ ಧೋನಿ ಗುರುತಿಸಿಕೊಳ್ಳಲಿದ್ದಾರೆ. 2020 ರ ಋತುವಿನಲ್ಲಿ ಪಂಜಬ್ ವಿರುದ್ಧ ಲೀಗ್ ಹಂತದ ಕೊನೇ ಪಂದ್ಯದ ಟಾಸ್ ವೇಳೆ 2021 ರಲ್ಲೂ ಆಡುವುದಾಗಿ ಧೋನಿ ಹೇಳಿಕೊಂಡಿದ್ದರು. ಸಿಎಸ್‌ಕೆ ಸಿಇಒ ಕಾಸಿ ವಿಶ್ವನಾಥನ್ ಕೂಡ ಮುಂದಿನ ಋತುವಿನಲ್ಲೂ ಧೋನಿ ತಂಡ ಮುನ್ನಡೆಸಲಿದ್ದಾರೆ ಎಂದಿದ್ದರು.

ಅರ್ಧ ಸಿಎಸ್‌ಕೆ 2021 ರಲ್ಲೂ  15 ಕೋಟಿ ರೂ.ಗೆ ಧೋನಿಯನ್ನು ಉಳಿಸಿಕೊಳ್ಳಲಿದೆ. ಐಪಿಎಲ್ ಇತಿಹಾಸದ ಧೋನಿ ಇದುವರೆಗೂ 137.8 ಕೋ.ರೂ. ವೇತನ ಪಡೆದುಕೊಂಡಿದ್ದಾರೆ. 2021 ರಲ್ಲೂ ಧೋನಿಯನ್ನು ಸಿಎಸ್‌ಕೆ 15 ಕೋಟಿ ರೂ.ಗೆ ಉಳಿಸಿಕೊಂಡರೆ ಧೋನಿಯ ಒಟ್ಟು ಸಂಬಳ 150 ಕೋ.ರೂ. ಮೀರಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss