Tuesday, July 5, 2022

Latest Posts

ಮತ್ತೊಂದು ದೊಡ್ಡ ಹೆಜ್ಜೆ ಇಟ್ಟ ಭಾರತೀಯ ವಾಯುಪಡೆ: ವಿಕಿರಣ ನಿರೋಧಕ ಕ್ಷಿಪಣಿ ‘ರುದ್ರಂ 1’ ಪರೀಕ್ಷೆ ಯಶಸ್ವಿ

ಹೊಸದಿಲ್ಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ನಡೆಸಿದ ವಿಕಿರಣ ನಿರೋಧಕ ಕ್ಷಿಪಣಿ ರುದ್ರಂ-1 ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದೆ.
ಈ ಕ್ಷಿಪಣಿಯು 2 ಮ್ಯಾಕ್ ನವರೆಗಿನ ಉಡಾವಣಾ ಸಾಮರ್ಥ್ಯ ಹೊಂದಿದ್ದು, ಶಬ್ದದ ವೇಗವು ಎರಡು ಪಟ್ಟಿದೆ ಎಂದು ಹೇಳಲಾಗ್ತಿದೆ.
ಬಂಗಾಳಕೊಲ್ಲಿಯ ಒಡಿಶಾ ಕರಾವಳಿಯಲ್ಲಿರುವ ಮಧ್ಯಂತರ ಪರೀಕ್ಷಾ ಶ್ರೇಣಿ ಬಾಲಸೋರ್ ನಲ್ಲಿ ಬೆಳಗ್ಗೆ 10.30ಕ್ಕೆ ಪರೀಕ್ಷೆ ನಡೆಯಿತು.
ಯಶಸ್ವಿ ಪರೀಕ್ಷೆಯ ಬಗ್ಗೆ ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಖುಷಿ ವ್ಯಕ್ತ ಪಡಿಸಿದ್ದು, ಇದು ಮತ್ತೊಂದು ದೊಡ್ಡ ಹೆಜ್ಜೆ ಎಂದು ಡಿಆರ್ ಡಿಒ ಹೇಳಿದ್ದಾರೆ. ‘ಶತ್ರು ವಾಯು ರಕ್ಷಣಾ ವ್ಯವಸ್ಥೆಯನ್ನ ನಾಶ ಮಾಡಲು ಈಗ ಐಎಎಫ್ ಸೀಡ್ (ಶತ್ರು ವಾಯು ರಕ್ಷಣಾ ನಿಗ್ರಹ) ಕಾರ್ಯಾಚರಣೆಗಳನ್ನ ಶತ್ರು ಪ್ರದೇಶದ ಆಳಕ್ಕೆ ನಡೆಸುವ ಸಾಮರ್ಥ್ಯ ಹೊಂದಿದೆ’ ಎಂದು ಅಧಿಕಾರಿ ಹೇಳಿದ್ದಾರೆ.
ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದ್ದಕ್ಕಾಗಿ ರಕ್ಷಣಾ ಸಚಿವ ರಾಜನಾಥ್​ ಸಿಂಗ್​​ ಅಭಿನಂದನೆ ಸಲ್ಲಿಕೆ ಮಾಡಿದ್ದಾರೆ.
ಸುಖೋಯ್-30 ಯುದ್ಧ ವಿಮಾನಕ್ಕೆ ರುದ್ರಂ-1 ಆ್ಯಂಟಿ ರೇಡಿಯೇಷನ್ ಮಿಸೈಲ್​ ಅಳವಡಿಕೆ ಮಾಡಿ ಪರೀಕ್ಷೆ ನಡೆಸಲಾಗಿದ್ದು, ಕರಾರುವಕ್ಕಾಗಿ ದಾಳಿ ಭೇದಿಸಿದೆ. ಇದರಿಂದ ಐಎಎಫ್ ನ ಸ್ಟ್ರೈಕ್ ವಿಮಾನ ಯಾವುದೇ ಅಡೆತಡೆಗಳನ್ನ ಒಡ್ಡದೆ ತನ್ನ ಕಾರ್ಯಾಚರಣೆಯನ್ನ ಪರಿಣಾಮಕಾರಿಯಾಗಿ ನಡೆಸಲು ಅನುವು ಮಾಡಿಕೊಡುತ್ತೆ. ಈ ಪರೀಕ್ಷೆಯು ದೊಡ್ಡ ಪ್ರಮಾಣದ ವಿಕಿರಣ ನಿರೋಧಕ ಕ್ಷಿಪಣಿಯ ಸಾಮರ್ಥ್ಯವನ್ನ ತೋರಿಸುತ್ತದೆ.
ಹೊಸ ಪೀಳಿಗೆಯ ವಿಕಿರಣ ನಿರೋಧಕ ಕ್ಷಿಪಣಿ ಅಥವಾ NGARM, Su-30MKI ಯುದ್ಧ ವಿಮಾನಗಳಲ್ಲಿ ಸಂಯೋಜಿಸಲ್ಪಟ್ಟಿದೆ. ಇದರ ವ್ಯಾಪ್ತಿ ಫೈಟರ್ ಜೆಟ್ ಹಾರಾಟ ನಡೆಸುವ ಎತ್ತರದ ಮೇಲೆ ಅವಲಂಬಿತವಾಗಿರುತ್ತದೆ. 500 ಮೀಟರ್ ನಿಂದ 15 ಕಿ.ಮೀ.ವರೆಗೆ ಎತ್ತರದಿಂದ ಉಡಾಯಿಸಬಹುದಾಗಿದ್ದು, 250 ಕಿ.ಮೀ ವ್ಯಾಪ್ತಿಯಲ್ಲಿ ವಿಕಿರಣ ಹೊರ ಹಾಕುವ ಗುರಿಗಳನ್ನ ಮುಟ್ಟಬಲ್ಲದು.
ಈ ಕ್ಷಿಪಣಿಯು ಗಾಳಿಯಿಂದ ಮೇಲ್ಮೈಗೆ ವಿಕಿರಣ ನಿರೋಧಕ ಕ್ಷಿಪಣಿಯನ್ನು ಹೊಂದಿದ್ದು, ವ್ಯಾಪಕ ಶ್ರೇಣಿಯ ತರಂಗಾಂತರಗಳ ವಿಕಿರಣದ ಮೂಲಗಳನ್ನು ಪತ್ತೆ ಹಚ್ಚುವ ನಿಷ್ಕ್ರಿಯ ಹೋಮಿಂಗ್ ಹೆಡ್ ಅನ್ನು ಹೊಂದಿದೆ. ಇದು ಉಡಾವಣೆಗೂ ಮುನ್ನ ಮಾತ್ರವಲ್ಲ, ಉಡಾವಣೆಯಾದ ನಂತರವೂ ಸಹ ಒಂದು ಗುರಿ ಮುಟ್ಟಬಹುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss