ಬೆಂಗಳೂರು: ಇಂಗ್ಲ್ಯಾಂಡ್ ಮೂಲದ ಬೇರ್ ಗ್ರಿಲ್ಸ್ ಮತ್ತು ತಂಡದ ಜೊತೆಗೆ ರಜನಿಕಾಂತ್ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಶೂಟಿಂಗ್ ಮಾಡಲಿದ್ದಾರೆ. ವಿದೇಶದಲ್ಲೂ ಖ್ಯಾತಿ ಪಡೆದಿದ್ದ ನರೇಂದ್ರ ಮೋದಿಯ ಮ್ಯಾನ್ ವರ್ಸಸ್ ವೈಲ್ಡ್ ಸರಣಿ ಸಾಕ್ಷ್ಯ ಚಿತ್ರವನ್ನು ಈಗ ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ಮಾಡಲಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅರಣ್ಯ ಅಧಿಕಾರಿಗಳು ಇಂದು ಮತ್ತು ಗುರುವಾರ ಶೂಟಿಂಗ್ ಗೆ 6 ಗಂಟೆಗಳ ಸಮಯ ನೀಡಿರುವುದಾಗಿ ತಿಳಿಸಿದ್ದಾರೆ. ಇಂದು ರಜನಿಕಾಂತ್ ಶೂಟಿಂಗ್ ನಲ್ಲಿರುವುದಾಗಿ ಮತ್ತು ಗುರುವಾರ ಅಕ್ಷಯ್ ಕುಮಾರ್ ಭಾಗಿಯಾಗಲಿದ್ದಾರೆ ಎಂದರು.
ಸುಲ್ತಾನ್ ಹೆದ್ದಾರಿ, ಮುಲ್ಲೆಹೊಲೆ, ಕಲ್ಕೆರೆ ಮತ್ತು ಮದ್ದೂರು ಅರಣ್ಯ ಭಾಗಗಳಲ್ಲಿ ಶೂಟಿಂಗ್ ನಡೆಯಲಿದ್ದು, ಪ್ರವಾಸಿಗರು ಇಲ್ಲದ ಸ್ಥಳಗಳಲ್ಲಿ ಶೂಟಿಂಗ್ ಮಾಡಲಿದ್ದಾರೆ. ಶೂಟಿಂಗ್ ನಿಂದ ಯಾವೂದೇ ಪ್ರಾಣಿಗಳಿಗೂ, ಪ್ರವಾಸಿಗರಿಗೂ ಹಾಗೂ ಅಗ್ನಿ ಶಾಮಕದಳದ ಸಿಬ್ಬಂದಿಗಳ ಕೆಲಸಗಳಿಗೆ ತೊಂದರೆ ಆಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.