Wednesday, August 10, 2022

Latest Posts

ಮಥುರಾ| ಶ್ರೀಕೃಷ್ಣ ಜನ್ಮಭೂಮಿಯಲ್ಲಿನ ಮಸೀದಿ ತೆರವುಗೊಳಿಸಲು ಸಲ್ಲಿಸಿದ್ದ ಅರ್ಜಿ ವಜಾ

ಮಥುರಾ: ಶ್ರೀಕೃಷ್ಣ ಜನ್ಮಭೂಮಿ ಮಥುರಾದ ಸಂಕೀರ್ಣದಲ್ಲಿ ನಿರ್ಮಾಣವಾಗಿರುವ ಈದ್ಲಾ ಮಸೀದಿ ತೆರುವುಗೊಳಿಸಲು ಸಲ್ಲಿಸಿದ್ದ ಅರ್ಜಿಯನ್ನು ಜಿಲ್ಲಾ ನ್ಯಾಯಾಲಯ ವಜಾಗೊಳಿಸಿದೆ.

ಕೃಷ್ಣ ಜನ್ಮಭೂಮಿ ಜಮೀನಿನ ಸಂಪೂರ್ಣ 13.37 ಎಕರೆ ಭೂಮಿಯ ಮಾಲೀಕತ್ವ ಹಿಂದೂಗಳದ್ದು ಎಂದು ವಕೀಲರಾದ ಹರಿಶಂಕರ್ ಜೈನ್ ಮತ್ತು ವಿಷ್ಣು ಜೈನ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಆದರೆ 1991 ರ ವಿಶೇಷ ನಿಯಮಾವಳಿ ಕಾಯ್ದೆಯ ಪ್ರಕಾರ ಪ್ರಾರ್ಥನಾ ಮಂದಿರಗಳ ಬದಲಾವಣೆ ಮಾಡುವುದು ಅಸಾಧ್ಯ ಎಂದು ಜಿಲ್ಲಾ ಸಹಾಯಕ ನ್ಯಾಯಾಧೀಶ ಛಾಯ್ಯಾ ಶರ್ಮಾ ಅರ್ಜಿ ತಿರಸ್ಕರಿಸಿದ್ದಾರೆ.

ಅ.15ರಂದು ಕೋರ್ಟ್ ಆದೇಶದ ಬೆನ್ನಲೆ ಸಭೆ ನಡೆಯಲಿದ್ದು, ಶ್ರೀಕೃಷ್ಣ ಜನ್ಮ ಭೂಮಿಗೆ ಅಗತ್ಯವಿರುವ ನಿರ್ಣಯ ಕೈಗೊಳ್ಳಲಿದೆ ಎಂದು ಅಖಾಡ ಪರಿಷತ್ ಅಧ್ಯಕ್ಷ ಮಹಾಂತ್ ನರೇಂದ್ರ ಗಿರಿ ತಿಳಿಸಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss