Friday, August 19, 2022

Latest Posts

ಮದನಮಡು ಗ್ರಾಮದ ಸೀಡ್ಯಕೆರೆ ಸಮೀಪ ಕುರಿಗಾಹಿಯ ಮೇಲೆ ಚಿರತೆ ಧಾಳಿ: ಗಾಯ

ತುಮಕೂರು: ಚಿ.ನಾ.ಹಳ್ಳಿ ತಾಲೂಕಿನ ಮದನಮಡು ಗ್ರಾಮದ ಸೀಡ್ಯಕೆರೆ ಸಮೀಪ ಚಿರತೆ ಕುರಿಗಾಹಿಯ ಮೇಲೆ ಧಾಳಿ ಮಾಡಿ ಗಾಯಗೊಳಿಸಿದೆ.
ಮೇಕೆಮೇಕೆ.ಕುರಿ ಮತ್ತು ದನಗಳನ್ನು ಮೇಯಿಸುತ್ತಿದ್ದ ಮೂಡ್ಲಯ್ಯನ ಮೇಲೆ ಮೊದಲು ಚಿರತೆ ದಾಳಿ ಮಾಡಿದೆ. ಆತ ತನ್ನ ಕುಡುಗೋಲು ಸಹಾಯದಿಂದ ಚಿರತೆಯನ್ನು ಎದುರಿಸಿದ್ದಾನೆ. ಆದರೆ ಅದು ಓಡಿ ಹೋದಂತೆ ಮಾಡಿ ಆತನ ಮೇಲೆ ತಿರುಗಿ ಬಿದ್ದು ಗಾಯಗೊಳಿಸಿದೆ. ಆಗ ಆತ ಕಿರುಚಿಕೊಂಡಿದ್ದು ಅಕ್ಕಪಕ್ಕದ ತೋಟದಲ್ಲಿ ರೈತರು ಆತನ ರಕ್ಷಣೆಗೇ ಬಂದ ಪರಿಣಾಮ ಚಿರತೆ ಓಡಿಹೋಗಿದೆ.ರೈತರು ಗಾಯಳುವನ್ನು ಚಿ.ನಾ.ಹಳ್ಳಿ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ದ್ದಾರೆ. ಕಳೆದ ತಿಂಗಳು ಗಳಿಗೇಕೆರೆ ಬಳಿ ವ್ಯಕ್ತಿ ಯೊಬ್ಬರ ಮೇಲೆ ದಾಳಿ ಮಾಡಿ ತ್ತು.ಅರಣ್ಯ ಇಲಾಖೆ ಅಧಿಕಾರಿಗಳು ಇತ್ತ ಗಮನಹರಿಸಬೇಕಾಗಿ ಜನರು ಒತ್ತಾಯ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!