Tuesday, July 5, 2022

Latest Posts

ಮದುವೆಗೆ ನಿರಾಕರಣೆ: ಕಿರುತೆರೆ ನಟಿ ಮಾಲ್ವಿ ಮಲ್ಹೋತ್ರಾಗೆ ಚಾಕುವಿನಿಂದ ಹಲ್ಲೆ ಮಾಡಿದ ಫೇಸ್‌ಬುಕ್ ಫ್ರೆಂಡ್

ಮುಂಬೈ: ಯುವಕನೋರ್ವ ತನ್ನನ್ನು ಮದುವೆಯಾಗಲು ನಿರಾಕರಿಸಿದ್ದಕ್ಕೆ ‘ಉಡಾನ್’ ಟೆಲಿವಿಷನ್​ ಶೋ ಖ್ಯಾತಿಯ ನಟಿ ಮಾಲ್ವಿ ಮಲ್ಹೋತ್ರಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಇವರಿಬ್ಬರು ಫೇಸ್‌ಬುಕ್​ನಲ್ಲಿ ಪರಿಚಯವಾಗಿ ಸ್ನೇಹಿತನಾಗಿದ್ದರು.
ಮುಂಬೈನ ವರ್ಸೋವಾದ ಕೃಷಿ ಮತ್ತು ಮೀನುಗಾರಿಕಾ ವಿಶ್ವವಿದ್ಯಾಲಯದ ರಸ್ತೆಯಲ್ಲಿ ನಿನ್ನೆ ರಾತ್ರಿ ಘಟನೆ ನಡೆದಿದೆ. ದುಬೈನಲ್ಲಿ ಶೂಟಿಂಗ್​ ಮುಗಿಸಿ ಮಾಲ್ವಿ ನಿನ್ನೆಯಷ್ಟೇ ಮುಂಬೈಗೆ ಹಿಂದಿರುಗಿದ್ದರು. ಗಾಯಗೊಂಡಿರುವ ಮಾಲ್ವಿಯನ್ನು ಕೋಕಿಲಾಬೆನ್ ಅಂಬಾನಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಆರೋಪಿ ಚಿತ್ರ ನಿರ್ಮಾಪಕ ಎಂದು ಹೇಳಲಾಗಿರುವ ಕುಮಾರ್​ ಮಹಿಪಾಲ್ ಸಿಂಗ್ ಆಗಿದ್ದು, 2019 ರಿಂದ ಈತ ಮಾಲ್ವಿ ಜೊತೆ ಫೇಸ್​ಬುಕ್​ನಲ್ಲಿ ಪರಿಚಯವಿದ್ದಾನೆ. ಇವರಿಬ್ಬರು ಕೆಲ ಬಾರಿ ಭೇಟಿಯಾಗಿದ್ದಾರೆ ಎಂದು ಕೂಡ ಹೇಳಲಾಗಿದೆ. ಈ ಸಂಬಂಧ ಕುಮಾರ್​ ಮಹಿಪಾಲ್ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ .

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss