Friday, August 12, 2022

Latest Posts

ಮದುವೆಗೆ ರೆಡಿಯಾದ ಪೈಲ್ವಾನ್ ಕಬೀರ್ ದುಹಾನ್ ಸಿಂಗ್, ಹೆಬ್ಬುಲಿ ಸಿನಿಮಾ ಮೂಲಕ ಕನ್ನಡಕ್ಕೆ ಎಂಟ್ರಿಕೊಟ್ಟಿದ್ದ ಸಿಂಗ್, ಯಾವಾಗ ಮದುವೆ ಗೊತ್ತಾ? ಹುಡುಗಿ ಯಾರು?

ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ಖಳ ಕಬೀರ್ ದುಹಾನ್ ಸಿಂಗ್ ವೈವಾಹಿಕ ಜೀವನಕ್ಕೆ  ಕಾಲಿಡಲು ಸಜ್ಜಾಗಿದ್ದಾರೆ.
ಬಹುಕಾಲದ ಗೆಳತಿ ಡಾಲಿ ಸಿಧು  ಕಬೀರ್ ಸಪ್ತಪದಿ ತುಳಿಯುತ್ತಿದ್ದಾರೆ.
ಕಬೀರ್ ದುಹಾನ್ ಸಿಂಗ್, ಸುದೀಪ್ ಅಭಿನಯದ ಹೆಬ್ಬುಲಿ ಸಿನಿಮಾ ಮೂಲಕ ಕನ್ನಡ ಸಿನಿಮಾರಂಗಕ್ಕೆ ಕಾಲಿಟ್ಟಿದ್ದಾರೆ. ಆ ನಂತರ ಅತಿರಥ ಮತ್ತು ಉದ್ಘರ್ಷ ಸಿನಿಮಾದಲ್ಲಿಯೂ ಮಿಂಚಿರುವ ಕಬೀರ್  ಕಳೆದ ವರ್ಷ ರಿಲೀಸ್ ಆದ ಪೈಲ್ವಾನ್ ಮೂಲಕ ಮತ್ತೆ ಸ್ಯಾಂಡಲ್ ವುಡ್ ನಲ್ಲಿ ಅಬ್ಬರಿಸಿದ್ದಾರೆ.ಟೋನಿ ಪಾತ್ರದ ಮೂಲಕ ಖ್ಯಾತಿಗಳಿಸಿರುವ ಕಬೀರ್, ಸುದೀಪ್ ಅವರ ಆಪ್ತ ಗೆಳೆಯ ಕೂಡ ಹೌದು. ಇದೀಗ ಕಬೀರ್ ಮದುವೆಯಾಗಲು ತಯಾರಿ ನಡೆಯುತ್ತಿದ್ದಾರೆ. ಈಗಾಗಲೆ ಕಬೀರ್ ಗೆ ಸ್ನೇಹಿತರು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶುಭ ಹಾರೈಸುತ್ತಿದ್ದಾರೆ.ಕಬೀರ್ ದುಹಾನ್ ಸಿಂಗ್, ಪ್ರೇಯಸಿ ಡಾಲಿ ಸಿಧು ಜೊತೆ ಕಳೆದ ವರ್ಷ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕುಟುಂಬದವರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಎಂಗೇಜ್ ಆಗಿರುವ ಈ ಜೋಡಿ, ಈ ವರ್ಷ ಮದುವೆ ಆಗಲು ನಿ‘ರ್ರಿಸಿದ್ದಾರೆ. ಅಂದ್ಹಾಗೆ ಇಬ್ಬರ ಮದುವೆ ೨೦೨೦ ಡಿಸೆಂಬರ್ ನಲ್ಲಿ ನಡೆಯಲಿದೆ.ಈ ವರ್ಷದ ಆರಂಭದಲ್ಲಿಯೆ ಇಬ್ಬರು ಮದುವೆ ಆಗಲು ಸಿದ್ಧತೆ ನೆಡಸಿದ್ದರು. ಆದರೆ ಕೊರೊನಾ ವೈರಸ್ ಹಾವಳಿಯ ಪರಿಣಾಮ ಇಬ್ಬರು ಮದುವೆ ಕಾರ್ಯಕ್ರಮ ಮುಂದಕ್ಕೆ ಹೋಗಿದೆ. ಸದ್ಯ ಡಿಸೆಂಬರ್ ನಲ್ಲಿ ಮದುವೆ ಆಗಲು ನಿರ್ಧರಿಸಿರುವ ಕಬೀರ್ ಅದ್ದೂರಿ ಕಾರ್ಯಕ್ರಮಕ್ಕೆ ಬ್ರೇಕ್ ಹಾಕಿದ್ದಾರೆ. ತೀರ ಸರಳವಾಗಿ ಇಬ್ಬರು ಹಸೆಮಣೆ ಏರುವ ಪ್ಲಾನ್ ಮಾಡಿದ್ದಾರೆ. ಕುಟುಂಬದರು ಮತ್ತು ತೀರಾ ಆಪ್ತರು ಮಾತ್ರ ಭಾಗಿಯಾಗಲಿದ್ದಾರೆ. ಕಬೀರ್ ಕೈ ಹಿಡಿಯುತ್ತಿರುವ ಜಾಲಿ ಸಿಧು ಪಂಜಾಬಿ ಮೂಲಕ ಖ್ಯಾತ ಗಾಯಕಿ ಇಬ್ಬರು ಸಮಾರು ೫ ವರ್ಷದಿಂದ ಸ್ನೇಹಿತರು. ಈ ಸ್ನೇಹ ಪ್ರೀತಿಗೆ ತಿರುಗಿ ಇದೀಗ ಮದುವೆಯಾಗಲು ನಿರ್ಧರಿಸಿದ್ದಾರೆ. ಇಬ್ಬರ ಮದುವೆ ಮುಂಬೈನಲ್ಲಿ ನಡೆಯಲಿದ್ದು, ದೆಹಲಿಯಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಸಲು ಪ್ಲಾನ್ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss