Wednesday, August 10, 2022

Latest Posts

ಮದುವೆಯ ಹೊಸ ಜೋಶ್‌ನಲ್ಲಿ ನಿಮ್ಮ ಪಾರ್ಟ್‌ನರ್ ಬಳಿ ಎಲ್ಲಾ ಹೇಳಿಕೊಂಡಿದ್ದೀರಾ? ಈ ವಿಷಯಗಳು ಯಾವಾಗಲೂ ಸೀಕ್ರೆಟ್ ಆಗಿದ್ದರೆ ಒಳ್ಳೆಯದು!

ಮದುವೆಯಾದ ಹೊಸತರಲ್ಲಿ ಜೋಶ್‌ನಲ್ಲಿ ಏನೇನೋ ಮಾತನಾಡಿಬಿಡುತ್ತೇವೆ. ಏನೇನೋ ಆಲೋಚನೆಗಳು ನಮ್ಮ ಮನಸು ತುಂಬಿರುತ್ತದೆ. ಆದರೆ ಮದುವೆಯಾದ ಹೊಸತರಲ್ಲಿ ಗಂಡ ಅಥವಾ ಹೆಂಡತಿಯ ಜೊತೆ ಈ ವಿಷಯಗಳನ್ನು ಶೇರ್ ಮಾಡಬೇಡಿ. ಇದು ಆಗ ಏನೂ ಎಫೆಕ್ಟ್ ಆಗದಿದ್ದರೂ ಮುಂದೆ ಎಫೆಕ್ಟ್ ಆಗುತ್ತದೆ. ಯಾವ ವಿಷಯಗಳು ಸೀಕ್ರೆಟ್ ಆಗಿ ಇದ್ದರೆ ಒಳ್ಳೆಯದು ನೋಡಿ..
ಹಳೇ ಬಾಯ್‌ಫ್ರೆಂಡ್ ಅಥವಾ ಗರ್ಲ್‌ಫ್ರೆಂಡ್ ವಿಷಯ: ನಿಮ್ಮ ಜೀವನದಲ್ಲಿ ತುಂಬಾ ಆಳವಾದ ಪ್ರೀತಿ ಇದ್ದಿರಬಹುದು. ಅದನ್ನು ಮನಸಿನಿಂದ ಕಿತ್ತುಹಾಕಬೇಕು ಎಂದೇನಿಲ್ಲ. ಮನಸಿನ ಮೂಲೆಯಲ್ಲಿ ಎಲ್ಲ ನೆನಪುಗಳು ಹೇಗಿರುತ್ತವೆಯೋ ಆ ನೆನಪು ಕೂಡ ಹಾಗೆ ಇರಲಿ. ಆದರೆ ಅದು ನಿಮ್ಮ ಪ್ರೆಸೆಂಟ್ ಜೀವನ ಹಾಳು ಮಾಡುವುದು ಬೇಡ. ಇದರ ಬಗ್ಗೆ ಮೊದಲಿಗೆ ಹೇಳಿದಾಗ ಮಾಮೂಲಿಯಾಗಿ ನಿಮ್ಮ ಪಾಟ್ನರ್ ರಿಯಾಕ್ಟ್ ಮಾಡಬಹುದು. ಆದರೆ ಅವರ ಮನಸಿನಲ್ಲಿ ಇದು ಉಳಿದಿರುತ್ತದೆ.
ದೈಹಿಕ ಸಂಬಂಧದ ಬಗ್ಗೆ: ಈ ಹಿಂದೆ ನಿಮ್ಮ ಪಾರ್ಟ್‌ನರ್ ಜೊತೆ ನಿಮ್ಮ ಏನೇ ಸಂಬಂಧ ಇರಲಿ. ಇದರ ಬಗ್ಗೆ ಓಪನ್ ಆಗಿ ಮಾತನಾಡಬೇಡಿ. ಅವರು ಎಷ್ಟೇ ಬ್ರಾಡ್ ಮೈಂಡೆಡ್ ಇರಲಿ. ಈ ವಿಷಯಗಳು ಚುಚ್ಚುತ್ತವೆ. ಹಾಗಾಗಿ ಇದು ನಿಮ್ಮಲ್ಲೇ ಉಳಿದರೆ ಒಳ್ಳೆಯದು.
ನಿಮ್ಮ ಎಕ್ಸ್‌ಗಳ ಹೆಸರು: ನಿಮ್ಮ ಹಳೆಯ ಬಾಯ್‌ಫ್ರೆಂಡ್ ಅಥವಾ ಗರ್ಲ್‌ಫ್ರೆಂಡ್ ಈಗ ನಿಮ್ಮ ಒಳ್ಳೆಯ ಸ್ನೇಹಿತರಾಗಿರಬಹುದು. ಈಗ ಅವರ ಹೆಸರುಗಳನ್ನು ನಿಮ್ಮ ಪಾರ್ಟ್‌ನರ್‌ಗೆ ಹೇಳಬೇಡಿ. ಈಗ ಅವರ ಜೊತೆ ನಾರ್ಮಲ್ ಆಗಿ ನೀವಿದ್ದರೂ ಅದು ಅವರಿಗೆ ಜಲಸ್ ಆಗಬಹುದು.
ದುಡ್ಡುಕಾಸಿನ ವಿಷಯ: ಮೊದಲಿಗೆ ನಿಮ್ಮ ಸಂಬಳದಲ್ಲಿ ಏನು ಮಾಡುತ್ತೀರಿ? ಹೇಗೆ ಖರ್ಚು ಮಾಡುತ್ತೀರಿ ಎನ್ನುವ ಲೆಕ್ಕ ಕೇಳಬೇಡಿ. ಹಾಗೇ ನಿಮ್ಮ ಹಣ ಏನು ಮಾಡುತ್ತೀರಿ? ಅದನ್ನು ಹೇಗೆಲ್ಲಾ ಇನ್ವೆಸ್ಟ್ ಮಾಡುತ್ತೀರಿ ಈ ಪ್ರಶ್ನೆಗಳು ಮೊದಲಿಗೇ ಕೇಳುವ ಅವಶ್ಯ ಇಲ್ಲ. ನಿಧಾನಕ್ಕೆ ತಿಳಿದುಕೊಳ್ಳಿ. ಹಣದ ಮಾತು ನಿಧಾನವಾಗಿ ಬರಲಿ.
ಮದುವೆಗೂ ಮುಂಚೆ ಹೇಗನಿಸಿತ್ತು?: ನಿಮಗೆ ಮೊದಲಿಗೆ ಅವರನ್ನು ನೋಡಿದಾಗ ಹೇಗನಿಸಿತ್ತು? ಇಷ್ಟ ಆಗಿರಲಿಲ್ಲ. ಅಥವಾ ಅವರ ಈ ವಿಷಯ ಮನಸಿಗೆ ಹಿಡಿಸಿರಲಿಲ್ಲ. ಇಂಥ ವಿಷಯಗಳನ್ನು ಹೇಳುವುದು ಬೇಡ. ನೀವು ಮೊದಲಿಗೆ ಹೀಗನಿಸಿದ್ದಿರಿ, ನಿಮ್ಮ ಬಗ್ಗೆ ಈ ರೀತಿ ಮಾತನಾಡಿದ್ದೆವು ಎಂದು ಹಾಸ್ಯ ಮಾಡಬೇಡಿ. ಮೊದಲಿಗೆ ಹೇಗೆ ಆಲೋಚಿಸುತ್ತಾರೋ ತಿಳಿದಿರುವುದಿಲ್ಲ.
ಮದುವೆ ಆಗಬಾರದು ಎನಿಸಿತ್ತು: ನನಗೆ ಈಗಲೇ ಮದುವೆ ಆಗಲು ಇಷ್ಟ ಇರಲಿಲ್ಲ. ನನ್ನ ಬ್ಯಾಚುಲರ್ ಜೀವನವನ್ನು ನಾನು ಮಿಸ್ ಮಾಡುತ್ತೇನೆ. ಏನೋ ಕೆಲಸ ಒತ್ತಡದಲ್ಲಿ ಮದುವೆಯಾಗದಿದ್ದರೆ ಚೆನ್ನಾಗಿರುತ್ತಿತ್ತು. ಇಂಥ ಮಾತುಗಳು ಬಾರದೇ ಇರಲಿ.
ಕಂಪೇರ್ ಮಾಡಬೇಡಿ: ನನ್ನ ಅಣ್ಣ ಅತ್ತಿಗೆ ಈ ರೀತಿ ಬದುಕುತ್ತಿದ್ದಾರೆ, ಅಕ್ಕ ಭಾವ ಇಷ್ಟು ಕೆಲಸ ಮಾಡಿಟ್ಟಿದ್ದಾರೆ ಖುಷಿಯಾಗಿದ್ದಾರೆ. ಅವರು ಮಾಡಿದ ಹಾಗೆ ನಾವು ಮಾಡಬೇಕು ಹೀಗೆ ಇನ್ನೊಬ್ಬರ ಉದಾಹರಣೆ ಕೊಟ್ಟು ಮಾತನಾಡಬೇಡಿ.ಇದು ಇನ್ನೊಬ್ಬರಿಗೆ ಇಷ್ಟವಾಗದಿರಬಹುದು.
ಅವರ ಸ್ನೇಹಿತರು, ಕುಟುಂಬದವರ ಬಗ್ಗೆ ಮಾತನಾಡಬೇಡಿ: ಅವರ ಸ್ನೇಹಿತರು,ಕುಟುಂಬದವರ ಬಗ್ಗೆ ಮಾತನಾಡಬೇಡಿ. ಇದು ಯಾರಿಗೂ ಇಷ್ಟ ಆಗುವುದಿಲ್ಲ. ಒಬ್ಬರ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳದೇ ಏನೇನೋ ಮಾತಾಡುವುದು ನಿಮ್ಮ ಮೇಲೆ ಕೆಟ್ಟ ಇಂಪ್ರೆಶನ್ ಬರುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss