ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಮದುವೆಯಾಗದಿದ್ದರೆ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕುತ್ತಿದ್ದ ಪಾಗಲ್ ಪ್ರೇಮಿಯ ವಿರುದ್ಧ ಬೆಂಗಳೂರಿನ ಆರ್. ಆರ್. ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಆರೋಪಿಯನ್ನು ಕಂಚೇನಹಳ್ಳಿ ನಿವಾಸಿ ಕೃಷ್ಣೇಗೌಡ(21) ಎಂದು ಗುರುತಿಸಲಾಗಿದೆ. ಆರೋಪಿ ಮತ್ತು ಯುವತಿ ಇಬ್ಬರೂ ಮೂರು ವರ್ಷದ ಹಿಂದೆ ಫೇಸ್ ಬುಕ್ ನಲ್ಲಿ ಪರಿಚಯವಾಗಿ, ಪ್ರೀತಿಸುತ್ತಿದ್ದರು. ಯುವತಿಯ ಮನೆಯಲ್ಲಿ ಅವಳ ಪ್ರೀತಿಯ ವಿಷಯ ತಿಳಿದು ಪೋಷಕರು ಅದಕ್ಕೆ ವಿರೋಧಿಸಿದಕ್ಕೆ ಯುವತಿ ಅವನಿಂದ ದೂರವಾಗಿದ್ದಳು.
ಇದರಿಂದ ಕೋಪಗೊಂಡ ಆರೋಪಿ ಕೃಷ್ಣೇಗೌಡ ಮದುವೆಯಾಗುವಂತೆ ವತ್ತಾಯಿಸುತ್ತಿದ್ದ. ಅದಕ್ಕೆ ಯುವತಿ ಒಪ್ಪದಿದ್ದಾಗ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಡುವುದಾಗಿ ಬೆದರಿಸುತ್ತಿದ್ದ. ಯುವತಿಯ ತಾಯಿ ನಡೆಸುತ್ತಿರುವ ಬ್ಯೂಟಿ ಪಾರ್ಲರ್ ಗೆ ಹೋಗಿ ಗಲಾಟೆ ಮಾಡಿದ್ದ. ಆರೋಪಿ ವಿರುದ್ಧ ಬೆಂಗಳೂರಿನ ಆರ್. ಆರ್. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.