ಹೊಸದಿಗಂತ ಆನ್ಲೈನ್ ಡೆಸ್ಕ್:
ಮದುವೆ ದಿಬ್ಬಣ ಹೊತ್ತೊಯ್ಯುತ್ತಿದ್ದ ಬಸ್, ರಸ್ತೆ ಬದಿ ನಿಲ್ಲಿಸಿದ್ದ ಟ್ಯಾಂಕರ್ ಲಾರಿಗೆ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದಾರೆ.
ಗುಜರಾತ್ನ ವ್ಯಾರಾ ಮತ್ತು ಬಾಜಿಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮಹಾರಾಷ್ಟ್ರದ ಮಾಲೇಗಾಂವ್ನಿಂದ ಗುಜರಾತಿನ ಸೂರತ್ಗೆ ಮದುವೆ ದಿಬ್ಬಣ ತೆರಳುತ್ತಿತ್ತು. ಬೆಳಗಿನ ಜಾವ ಮಂಜು ಕವಿದಿದ್ದರಿಂದ ಬಸ್ ಚಾಲಕನಿಗೆ ರಸ್ತೆ ಬದಿಯಲ್ಲಿ ನಿಂತಿದ್ದ ವಾಹನ ಕಾಣದೇ ಅಪಘಾತ ಸಂಭವಿದೆ ಎಂದು ವಲೋಡ್ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ವಿ.ಆರ್. ವಾಸವ್ ಹೇಳಿದ್ದಾರೆ.