ಹೊಸ ದಿಗಂತ ವರದಿ, ಮೈಸೂರು:
ಮದುವೆಗೆ ಎಷ್ಟೇ ಹುಡುಕಿದರೂ ತನಗ್ಯಾರು ಹೆಣ್ಣು ಕೊಡುತ್ತಿಲ್ಲ ಎಂದು ಮನನೊಂದ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕಪ್ಪಸೋಗೆ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಗ್ರಾಮದ ನಿವಾಸಿ ಪ್ರವೀಣ್ ಎಂಬಾತನೇ ಆತ್ಮಹತ್ಯೆ ಮಾಡಿಕೊಂಡವ. ಕಳೆದ ಆರೇಳು ವರ್ಷಗಳಿಂದ ಎಲ್ಲೆಡೆ ಹುಡುಕಿದರೂ ಮದುವೆಗೆ ಹೆಣ್ಣು ಸಿಗಲಿಲ್ಲ. ಕೃಷಿಕನಾಗಿರುವ ಕಾರಣ ಹೆಣ್ಣು ಕೊಡಲು ನಿರಾಕರಿಸಲಾಗುತ್ತಿತ್ತು. ಇದರಿಂದ ಪ್ರವೀಣ್ ಮಾನಸಿಕ ಖಿನ್ನತೆಗೆ ಒಳಗಾಗಿದ್ದನು. ಮದುವೆಯಾಗಲಿಲ್ಲ ಎಂಬ ಕೊರಗಿನಿಂದ ಮನೆಯ ಕೋಣೆಯಲ್ಲಿ ಇಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಸಂಬAಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.