Wednesday, June 29, 2022

Latest Posts

ಮದುವೆ ಮಾತುಕತೆಗೂ ಮುನ್ನ ಧರ್ಮ, ಉದ್ಯೋಗ, ಆದಾಯ ಘೋಷಿಸುವುದು ಕಡ್ಡಾಯ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಮಹಿಳೆ, ಪುರುಷರೆಲ್ಲರೂ ಅವರವರ ಧರ್ಮ, ಉದ್ಯೋಗ, ಆದಾಯ ಘೋಷಿಸಿಯೇ ಮದುವೆ ಮಾತುಕತೆ ಮುಂದುವರೆಸಬೇಕು. ಈ ಅಂಶವನ್ನು ಒಳಗೊಂಡ ಕರಡು ಮಸೂದೆಯನ್ನು ಸರ್ಕಾರ ಸಿದ್ದಪಡಿಸುತ್ತಿದೆ ಎಂದು ಅಸ್ಸಾಂ ಸಚಿವ ಹಿಮವಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ.

ಈ ಮಸೂದೆಯನ್ನು ಮಹಿಳಾ ಸಬಲೀಕರಣದ ದೃಷ್ಟಿಯಿಂದ ರಚಿಸಲಾಗುತ್ತಿದೆ. ಗಂಡ-ಹೆಂಡತಿಯ ನಡುವೆ ಯಾವುದೇ ಮುಚ್ಚುಮರೆ ಇರಕೂಡದು.ಎಲ್ಲಾ ವಿಷಯಗಳನ್ನು ಪರಸ್ಪರ ಅರಿತಿರಬೇಕು.  ಆದಾಯದ, ಧರ್ಮ, ಉದ್ಯೋಗ ವಿಚಾರದಲ್ಲಿ ವಂಚನೆ, ಮೋಸ ನಡೆಯಬಾರದು. ಹಾಗಾಗಿ ವಿವಾಹದ ಕಾನೂನಿನಲ್ಲಿ ಪಾರದರ್ಶಕತೆ ತರಲು ಕರಡು ಮಸೂದೆಯನ್ನು ಸರ್ಕಾರ ಸಿದ್ದಪಡಿಸುತ್ತಿದೆ ಎಂದು ಬಿಸ್ವಾ ಶರ್ಮಾ ಹೇಳಿದ್ದಾರೆ.

ನಮ್ಮ ಆಲೋಚನೆ ‘ಲವ್ ಜಿಹಾದ್’ ಗೆ ಕುರಿತಾದುದಲ್ಲ, ಅದಕ್ಕೂ ಮೀರಿದ ಮಸೂದೆ ಇದು. ಗುರುತು, ಉದ್ಯೋಗ ಅಥವಾ ಆದಾಯದಲ್ಲಿ ವಧು-ವರರ ನಡುವೆ ಯಾವುದೇ ಮುಚ್ಚುಮರೆ ಇರಬಾರದು ಎಂಬುದು ನನ್ನ ಆಲೋಚನೆ. ಅಸ್ಸಾಂ ಸರ್ಕಾರ ಏನಾದರೂ ಯೋಜನೆ ರೂಪಿಸಿದ್ದಾದರೆ ಅದು ಯಾವುದೇ ಧರ್ಮಕ್ಕೆ ವಿರುದ್ಧವಾಗಿರುವುದಿಲ್ಲ ಎಂದು ಹಿಮಂತ ಬಿಸ್ವಾ ಸ್ಪಷ್ಟಪಡಿಸಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss