ಹೊಸದಿಗಂತ ವರದಿ, ಅಂಕೋಲ:
ಮದುವೆ ಹೆಣ್ಣಿನ ಮನೆಯಲ್ಲಿ ಗುಂಡಿನ ದಾಳಿ ನಡೆಸಿದ ಘಟನೆ ಶನಿವಾರ ನಸುಕಿನ ಜಾವ ತಾಲೂಕಿನ ಅವರ್ಸಾದ ಸಕಲಬೇಣಾದಲ್ಲಿ ನಡೆದಿದ್ದು ದಾಳಿಯಿಂದ ಯಾವುದೆ ಪ್ರಾಣಾಪಾಯ ನಡೆದಿಲ್ಲ.
ರಾಮನಗುಳಿಯ ವಧುವಿನ ಜೊತೆ ಯಲ್ಲಾಪುರದ ವರನ ಮದುವೆ ಅವರ್ಸಾದ ಲಕ್ಷ್ಮೀನಾರಾಯಣ ಸಭಾಭವನದಲ್ಲಿ ನಡೆಯಬೇಕಿತ್ತು. ಎರಡು ದಿನದ ಮುಂಚಿತವಾಗಿಯೆ ವದುವಿನ ಕಡೆಯವರು ಅವರ್ಸಾದ ವಧುವಿನ ಚಿಕ್ಕಮ್ಮನ ಮನೆಯಲ್ಲಿ ಮದುವೆಗೆ ಎಲ್ಲಾ ಸಿದ್ಧತೆಯಲ್ಲಿದ್ದರು.
ಮದುವೆ ದಿನದಂದು ಬೆಳಂಬೆಳಗ್ಗೆ ೪ ಗಂಟೆಯ ಸುಮಾರಿಗೆ ವಧು ಇರುವ ಮನೆಯ ಹೊರಬಾಗದಿಂದ ಆಗಂತಕನೊಬ್ಬ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾನೆ. ಆತ ಹೊಡೆದ ಗುಂಡು ಮನೆಯ ಕಿಟಕಿ ಭಾಗದಲ್ಲಿ ತಾಗಿ ಮನೆಯೊಳಗೆ ಪ್ರವೇಶಿಸಿದೆ. ನಂತರ ಆತ ಪರಾರಿಯಾಗಿದ್ದಾನೆ.
ಮನೆಯವರು ಕಳೆದ ಕೆಲ ದಿನಗಳಿಂದ ಮದುವೆ ಆಗಬೇಕು ಎಂದು ಪೀಡಿಸುತ್ತಿದ್ದ ರಾಜೇಶ ಗಾಂವಕರನ ಮೇಲೆ ಅನುಮಾನ ಪಟ್ಟಿದ್ದು, ಈ ಕೃತ್ಯ ಈತನೆ ಮಾಡಿರಬಹುದೆಂದು ಶಂಖೆ ವ್ಯಕ್ತಪಡಿಸಿದ್ದಾರೆ. ಈತ ಕಳೆದ ಐದಾರು ದಿನದ ಹಿಂದೆ ಕಾಣೆಯಾಗಿರುವ ಕುರಿತು ದೂರು ಕೂಡ ದಾಖಲಾಗಿದೆ. ಈತನು ವಧುವನ್ನು ಹಲವು ಭಾರಿ ಕಾಡಿಸುತಿದ್ದ ಎಂದು ಸಂಬಂಗಳು ತಿಳಿಸಿದ್ದಾರೆ.
ಪೊಲೀಸ್ ಪಹರೆಯಲ್ಲಿ ಮದುವೆ ಗುಂಡಿನ ದಾಳಿಯಿಂದ ಬೆದರಿದ ಕುಟುಂಬಕ್ಕೆ ಪೊಲೀಸ್ ಬಿಗಿ ಭದ್ರತೆ ನೀಡಲಾಯಿತು. ಮದುವೆ ಮಂಟಪದಲ್ಲಿ ಬಿಗಿ ಪೊಲೀಸ್ ಬಂದೊಬಸ್ತ್ ಮಾಡುವ ಮೂಲಕ ವಿವಾಹ ನೆರವೇರಿತು.
ಇನ್ನು ಘಟನೆ ಸಂಬಂಧ ವಧುವಿನ ಕುಟುಂಬದವರು ಅಂಕೋಲಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಗುಂಡಿನ ದಾಳಿ ನಡೆದ ಸ್ಥಳಕ್ಕೆ ಮತ್ತು ಲಕ್ಷ್ಮೀನಾರಾಯಣ ಕಲ್ಯಾಣ ಮಂಟಪಕ್ಕೆ ಜಿಲ್ಲಾ ಪೊಲೀಸ್ ವರೀಷ್ಠಾಕಾರಿ ಶಿವಪ್ರಕಾಶ ದೇವರಾಜು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ