Thursday, July 7, 2022

Latest Posts

ಮದುವೆ ಹೊಸತರಲ್ಲಿ ಹೇಗಿದ್ದಿರಿ ನೆನಪಿದ್ಯಾ? ಈಗೇಕೆ ಹಾಗಿಲ್ಲ? ನಿಮ್ಮ ಸಂಬಂಧಕ್ಕೊಂದು ಫ್ರೆಶ್ ಸ್ಟಾರ್ಟ್ ಕೊಡಲು ಇಲ್ಲಿದೆ ಟಿಪ್ಸ್..

ಮದುವೆಯಾದ ಹೊಸತರಲ್ಲಿ ಎಲ್ಲವೂ ಚೆನ್ನಾಗಿ ಇರುತ್ತದೆ. ಒಬ್ಬರಿಗೊಬ್ಬರು ನೋವಾಗದಂತೆ ಕಾಪಾಡುತ್ತಾರೆ. ನೆಮ್ಮದಿಯಾಗಿ ಇರುತ್ತಾರೆ. ಅತೀ ಹೆಚ್ಚು ಪ್ರೀತಿ ಇರುವುದರಿಂದ ಇಬ್ಬರ ತಪ್ಪುಗಳು ಕಾಣುವುದಿಲ್ಲ. ಏನೇ ಮಾಡಿದರೂ ಚಂದ ಎನಿಸುತ್ತದೆ ಆದರೆ ಬರುಬರುತ್ತಾ ಇದೇ ಪ್ರೀತಿ ಇದೇ ರೀತಿ ಇರಲು ಸಾಧ್ಯವಿಲ್ಲ. ಜೀವನದಲ್ಲಿ ಯಾವ ವ್ಯಕ್ತಿಯನ್ನೂ ನಾವು ಯಾವಾಗಲೂ ಪ್ರೀತಿಸಲು ಸಾಧ್ಯವೇ ಇಲ್ಲ. ಸಣ್ಣ ಬಿರುಕು ಸಾಮಾನ್ಯ. ಮದುವೆಯಾಗಿ ಹತ್ತಿಪ್ಪತ್ತು ವರ್ಷ ಕಳೆದಿದೆ ಇನ್ನೇನು ರೊಮ್ಯಾನ್ಸ್ ಎನ್ನುವವರು ಈ ಟಿಪ್ಸ್ ಫಾಲೋ ಮಾಡಿ…

  • ಹೆಂಡತಿ/ಗಂಡನನ್ನು ಸರಿಯಾಗಿ ನೋಡಿ. ನೋಡುವೆಂದರೆ ನೋಡುವುದಷ್ಟೇ ಅಲ್ಲ, ಅಬ್ಸರ‍್ವ್ ಮಾಡಿ. ಅವರು ಮುಂಚೆ ಹೇಗಿದ್ದರು ಈಗ ಹೇಗಾಗಿದ್ದಾರೆ, ಅದಕ್ಕೆ ಕಾರಣ ಏನಿರಬಹುದು ಎಂದು ತಿಳಿಯಿರಿ.
  • ನೀವು ಹೇಗಿದ್ದೀರಾ ಎಂದು ಕೇಳಿ. ಬರೀ ನೀವು ಅವರ ಬಗ್ಗೆ ದೂರುತ್ತೀರ ಅಥವಾ ನಿಮ್ಮ ನೋವು ಹೇಳಿಕೊಳ್ಳುತ್ತೀರ, ಆದರೆ ಅವರ ಬಗ್ಗೆ ಕೇಳಿದ್ದೀರಾ? ಪರಿಸ್ಥಿತಿ ಹೇಗಿದೆ? ಆಫೀಸ್ ಹೇಗಿದೆ? ಮಾತನಾಡಿ.
  • ಮುಕ್ತವಾಗಿ ಮಾತನಾಡಿ, ನಿಮ್ಮ ಸಮಸ್ಯೆ ಏನು? ಅವರಿಂದ ನೀವು ಏನನ್ನು ನಿರೀಕ್ಷಿಸುತ್ತಿದ್ದೀರಿ? ಬಾಯ್ಬಿಟ್ಟು ಕೇಳಿ. ಇದರಿಂದ ಅವರಿಗೂ ಜೀವನ ಸುಲಭ, ನಿಮಗೂ ಸುಲಭ.
  • ರೊಮ್ಯಾನ್ಸ್ ಇರಲಿ. ಮದುವೆಯಾದ ಹೊಸತರದಲ್ಲಿ ದೊಡ್ಡವರ ಮುಂದೆಯೂ ಕೈ ಹಿಡಿದುಕೊಂಡೇ ಇರುತ್ತಿದ್ದಿರಿ, ಅವಕಾಶ ಸಿಕ್ಕಾಗೆಲ್ಲ ಕೆನ್ನೆಗೆ ಮುತ್ತಿಡುತ್ತಿದ್ದಿರಿ. ಆದರೆ ಈಗ ಅದ್ಯಾವುದೂ ಇಲ್ಲ. ಏಕೆ? ಆಲೋಚಿಸಿ, ರೊಮ್ಯಾನ್ಸ್‌ಗೆ ಯಾವ ವಯಸ್ಸಾದರೇನು ಅಲ್ಲವಾ?
  • ಅವರ ಮನೆಯವರನ್ನು ಪ್ರೀತಿಸಿ. ಅವರ ಕುಟುಂಬದವರನ್ನು ಪ್ರೀತಿಸಿ. ಇದರಿಂದ ನೀವು ನಿಮ್ಮ ಪಾರ್ಟ್‌ನರ್ ಮನಸ್ಸನ್ನು ಗೆಲ್ಲಬಹುದು. ಅವರ ಮನಸ್ಸಿನಲ್ಲಿಯೂ ನಿಮ್ಮ ಬಗ್ಗೆ ಒಳ್ಳೆ ಭಾವನೆ ಇರುತ್ತದೆ.
  • ಕೆಲಸಕ್ಕೆ ಸಹಾಯ ಮಾಡಿ. ಹೆಂಡತಿಗೆ ಒಂದು ದಿನವಾದರೂ ಸಹಾಯ ಮಾಡಿ. ನಾನು ಕೆಲಸ ಮಾಡುತ್ತೇನೆ. ನಾನು ತರಕಾರಿ ಹೆಚ್ಚಿಕೊಡುತ್ತೇನೆ ಎಂದು ಮುಂದೆ ಹೋಗಿ. ಆಕೆಗೆ ಇದು ಅತೀವ ಸುಖ.
  • ಮಕ್ಕಳು ಅವರು ಸೇರಿ ಟ್ರಿಪ್ ಹೋಗಿ. ಆಗಾಗ ಜೀವನದಲ್ಲಿ ಬದಲಾವಣೆ ಬೇಕೆನಿಸುತ್ತದೆ. ನಿಮ್ಮವರನ್ನು ಕರೆದುಕೊಂಡು ಟ್ರಿಪ್ ಮಾಡಿ. ಇಬ್ಬರ ಮೂಡ್ ಕೂಡ ಹಗುರಾಗುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss