ಮದ್ದೂರು: ಬಕ್ರಿದ್ ಹಿನ್ನಲೆಯಲ್ಲಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಗೋವೊಂದನ್ನು ಹಿಂದೂಜಾಗರಣ ವೇದಿಕೆ ಕಾರ್ಯಕರ್ತರು ದಾಳಿ ನಡೆಸಿ ವಾಹನ ಸಮೇತ ಪೊಲೀಸರಿಗೆ ಒಪ್ಪಿಸಿದ ಘಟನೆ ತಾಲೂಕಿನ ಬೆಸಗರಹಳ್ಳಿ ಸಮೀಪದ ಕೆರೆಮೇಗಳದೊಡ್ಡಿ ಗ್ರಾಮದಲ್ಲಿಗುರುವಾರ ಜರುಗಿದೆ.
ತಾಲೂಕಿನ ಕೊಪ್ಪ ಗ್ರಾಮದ ಖಾದರ್ ಆಲಿ ಎಂಬುವನ್ನು ಬಂಧಿಸಿರುವ ಪೊಲೀಸರು, ಹಸು ಸಾಗಾಣಿಕೆಗೆ ಬಳಸುತ್ತಿದ್ದ ಟಾಟಾ ಏಸ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ಖಾದರ್ ಆಲಿ ಕೊಪ್ಪ ಕಡೆಯಿಂದ ಹಸುವೊಂದನ್ನು ಟಾಟಾ ಏಸ್ ವಾಹನದಲ್ಲಿ ಮಂಡ್ಯದ ಕಸಾಯಿಖಾನೆಗೆ ಸಾಗಾಣಿಕೆ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಅರಿತ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಹಾಗೂ ಪೆÇಲೀಸರು ಜಂಟಿ ದಾಳಿ ನಡೆಸಿ ವಾಹನ ಸಮೇತ ಹಸುವನ್ನು ವಶಕ್ಕೆ ತೆಗೆದುಕೊಂಡು, ಮೈಸೂರಿನ ಪಿಂಜ ಠಾಣಾ ಪೊಲೀಸ್ ವಶಕ್ಕೆ ನೀಡಲಾಗಿದೆ.
ಆರೋಪಿ ಖಾದರ್ ಆಲಿ ವಿರುದ್ಧ ಗೋಹತ್ಯೆ ನಿಷೇದ ಕಾಯಿದೆಯನ್ವಯ ಪ್ರಕರಣ ದಾಖಲು ಮಾಡಿಕೊಂಡಿದ್ದು, ಮದ್ದೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.