Monday, August 8, 2022

Latest Posts

ಮದ್ದೂರು| ಕುಡಿದ ಮತ್ತಿನಲ್ಲಿ ಅಪರಿಚಿತನ ಕೊಲೆ

ಮದ್ದೂರು: ಕ್ಷುಲ್ಲಕ ಕಾರಣಕ್ಕಾಗಿ ಪಾನಮತ್ತನಾಗಿದ್ದ ವ್ಯಕ್ತಿಯೋರ್ವ ಅಪರಿಚಿತ ವ್ಯಕ್ತಿಯನ್ನು ಕೊಲೆ ಮಾಡಿರುವ ಘಟನೆ ತಾಲೂಕಿನ ನಿಡಘಟ್ಟ ಗ್ರಾಮದ ಸಂತೇಮೈದಾನದಲ್ಲಿ ಬುಧವಾರ ರಾತ್ರಿ ಜರುಗಿದೆ.
ಸುಮಾರು ೫೦ ರಿಂದ ೫೫ ವರ್ಷ ವಯಸ್ಸಿನ ವ್ಯಕ್ತಿಯನ್ನು ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಲಾಗಿದೆ. ಘಟನೆ ಸಂಬoಧ ಮಳವಳ್ಳಿ ಮೂಲದ ಮಾದೇಶ (೨೨) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಮಾದೇಶ ಮತ್ತು ಕೊಲೆಯಾದ ವ್ಯಕ್ತಿ ನಿಡಘಟ್ಟ ಗ್ರಾಮದ ಸಂತೇಮೈದಾನದ ಎಪಿಎಂಸಿ ಹರಾಜು ಕಟ್ಟೆ ಷೆಡ್‌ನಲ್ಲಿ ಕಳೆದ ಹಲವಾರು ತಿಂಗಳುಗಳಿoದ ವಾಸವಾಗಿದ್ದರು. ಬುಧವಾರ ರಾತ್ರಿ ಪಾನಮತ್ತರಾಗಿದ್ದ ಇಬ್ಬರ ನಡುವೆ ಚುರುಮುರಿ ನೀಡುವ ವಿಚಾರಕ್ಕೆ ಗಲಾಟೆಯಾಗಿದೆ. ಇದರಿಂದ ಆಕ್ರೋಶಗೊಂಡ ಆರೋಪಿ ಮಾದೇಶ ಅಪರಿಚಿತ ವ್ಯಕ್ತಿಗೆ ಕಲ್ಲಿನಿಂದ ತಲೆ ಮೇಲೆ ಹೊಡೆದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬoಧ ಮದ್ದೂರು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ. ಪರಶುರಾಮ, ಅಪರ ಪೊಲೀಸ್ ಅಧೀಕ್ಷಕಿ ಡಾ. ವಿ.ಜೆ. ಶೋಭಾರಾಣಿ, ಡಿವೈಎಸ್ಪಿ ಎಂ.ಜೆ. ಪೃಥ್ವಿ ಹಾಗೂ ಶ್ವಾನದಳದ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss