Sunday, June 26, 2022

Latest Posts

ಮದ್ದೂರು| ಕೊರೋನಾ ಸೋಂಕಿತ ವ್ಯಕ್ತಿ ಹೃದಾಯಾಘಾತದಿಂದ ಸಾವು

ಮದ್ದೂರು : ಕೊರೋನಾ ಸೋಂಕಿತ ವ್ಯಕ್ತಿ ಹೃದಾಯಘಾತದಿಂದ ಮೃತಪಟ್ಟಿರುವ ಘಟನೆ ಪಟ್ಟಣದಲ್ಲಿ ಗುರುವಾರ ರಾತ್ರಿ ಜರುಗಿದೆ. ಲೀಲಾವತಿ ಬಡಾವಣೆಯ ಎರಡನೇ ಕ್ರಾಸ್ ನಿವಾಸಿ ಅಬ್ದುಲ್ ಅದೀಜ್(60) ಮೃತವ್ಯಕ್ತಿ. ವೃತ್ತಿಯಲ್ಲಿ ಟೈಲರಿಂಗ್ ಕೆಲಸ ಮಾಡುತ್ತಿದ್ದ ಅಬ್ದುಲ್ ಕಳೆದ 7 ರಂದು ಜ್ವರದಿಂದ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ನಂತರ ಈತನ ಪರಿಸ್ಥಿತಿ ಚಿಂತಾಜನಕವಾದ ಕಾಣವಾದ ಕಾರಣ ಮಂಡ್ಯಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಜು.11 ರಂದು ಅಬ್ದುಲ್ ಅದೀಜ್ ಗಂಟಲು ದ್ರವ ಪರೀಕ್ಷೆ ನಡೆಸಿದಾಗ ಕೊರೋನಾಸೋಂಕು ಇರುವುದು ಪತ್ತೆಯಾಗಿದ್ದು ನಂತರ ಈತನನ್ನು ಮಂಡ್ಯ ಜಿಲ್ಲಾಸ್ಪತ್ರೆಯ ತೀವ್ರನಿಗಾಘಟಕದಲ್ಲಿ ಇರಿಸಿ ಚಿಕಿತ್ಸೆ ನಿಡಲಾಗುತಿತ್ತು. ಗುರುವಾರ ರಾತ್ರಿ ತೀವ್ರ ಹೃದಾಯಘಾತದಿಂದ ಅಬ್ದುಲ್ ಅಜೀದ್ ಕೊನೆಯುಸಿರೆಳೆದಿದ್ದಾರೆಂದು ಆರೋಗ್ಯ ಇಲಾಕೆ ಮೂಲಗಳು ತಿಳಿಸಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss