ಮದ್ದೂರು : ಕ್ಷುಲ್ಲಕ ಕಾರಣಕ್ಕೆ ಪಾನಮತ್ತ ಯುವಕರ ಗುಂಪು ಬಾರೊಂದರಲ್ಲಿ ಪರಸ್ಪರ ಹೊಡೆದಾಡಿಕೊಂಡು ಗಾಯಗೊಂಡಿರುವ ಘಟನೆ ತಾಲೂಕಿನ ಚಾಮನಹಳ್ಳಿ ಗ್ರಾಮದ ಬಳಿ ಬುಧವಾರ ಜರುಗಿದೆ.
ರಾಮನಗರ ಜಿಲ್ಲೆ, ಚನ್ನಪಟ್ಟಣ ತಾಲೂಕಿನ ಗುಡೇಮಾರಸಿಂಹನಹಳ್ಳಿ ಗ್ರಾಮದ ಲೇ. ಬೋರೇಗೌಡನ ಪುತ್ರ ಮೋಹನ್ಕುಮಾರ್ (45), ಚಾಮನಹಳ್ಳಿಯ ಸುಹಾಸ್ (36) ಹಾಗೂ ಸುರೇಶ್ (22) ಎಂಬುವರು ತೀವ್ರವಾಗಿ ಗಾಯಗೊಂಡಿದ್ದಾರೆ.
ಗಾಯಗೊಂಡವರನ್ನು ಮದ್ದೂರು ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಮೋಹನ್ಕುಮಾರ್ ಸ್ಥಿತಿ ಚಿಂತಾಜನಕವಾಗಿದೆ.
ಚಾಮನಹಳ್ಳಿ ಗ್ರಾಮದ ಮದ್ದೂರು ಕೊಪ್ಪ ರಸ್ತೆಯ ಪಿ.ಎಂ. ಬಾರ್ನಲ್ಲಿ ಮಧ್ಯಾಹ್ನ 2-30ರ ಸುಮಾರಿಗೆ ಮೋಹನ್ಕುಮಾರ್ ಮದ್ಯಸೇವನೆ ಮಾಡಿ ಕೂಗಾಟ, ರಂಪಾಟ ಮಾಡಿದ್ದಾನೆ. ಈ ವೇಳೆ ಅದೇ ಬಾರ್ನಲ್ಲಿ ಮದ್ಯಪಾನ ಮಾಡುತ್ತಿದ್ದ ಸುಹಾಸ್ ಹಾಗೂ ಸುರೇಶ್ ಗಲಾಟೆ ಮಾಡದಂತೆ ನಿಶ್ಯಬ್ಧವಾಗಿ ಮದ್ಯ ಸೇವನೆ ಮಾಡುವಂತೆ ತಾಕೀತು ಮಾಡಿದ್ದಾರೆ.
ಇದರಿಂದ ಮೂವರ ನಡುವೆ ಮಾತಿನ ಚಕಮಕಿ ನಡೆದ ಪರಿಣಾಮ ಆಕ್ರೋಶಗೊಂಡ ಮೋಹನ್ಕುಮಾರ್ ಬಾಟಲಿಯಿಂದ ಸುಹಾಸ್ ಹಾಗೂ ಸುರೇಶ್ ಹೊಟ್ಟೆಗೆ ಇರಿದು ಗಾಯಗೊಳಿಸಿದ್ದಾನೆ. ನಂತರ ಮೋಹನ್ಕುಮಾರ್ ಮೇಲೆ ಮುಗಿಬಿದ್ದ ಸುಹಾಸ್ ಮತ್ತು ಸುರೇಶ್, ಅದೇ ಬಾಟಲಿಯಿಂದ ತಲೆಗೆ ಹೊಡೆದು ಗಾಯಗೊಳಿಸಿದ್ದಾರೆ.
ಸುದ್ಧಿ ತಿಳಿದು ಸ್ಥಳಕ್ಕೆ ಧಾವಿಸಿದ ಮದ್ದೂರು ಪೆÇಲೀಸರು ಮೂವರನ್ನು ಆಸ್ಪತ್ರೆಗೆ ಕರೆತಂದು ದಾಖಲಿಸಿದ್ದಾರೆ. ಈ ಸಂಬಂಧ ಕೊಲೆ ಯತ್ನ, ಹಲ್ಲೆ ಪ್ರಕರಣ ದಾಖಲು ಮಾಡಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.