Monday, August 8, 2022

Latest Posts

ಮದ್ದೂರು| ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಆ್ಯಂಬ್ಯುಲೆನ್ಸ್‍ನಲ್ಲಿ ತಂದ ಶವ ವಾಪಸ್ಸು

ಮದ್ದೂರು : ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಶವವನ್ನು ಆಂಬ್ಯುಲೆನ್ಸ್‍ನಲ್ಲಿ ಅಂತ್ಯಕ್ರಿಯೆಗಾಗಿ ಮದ್ದೂರು ತಾಲೂಕಿಗೆ ತಂದ ಸಮಯದಲ್ಲಿ ಕೊರೋನಾ ಪರೀಕ್ಷೆ ವರದಿ ಇಲ್ಲವೆಂಬ ಕಾರಣಕ್ಕೆ ತಾಲೂಕು ಆಡಳಿತ ಮತ್ತು ಪೊಲೀಸರು ಶವವನ್ನು ವಾಪಸ್ಸು ಕಳುಹಿಸದ ಘಟನೆ ಗುರುವಾರ ಜರುಗಿದೆ.
ಪೊಲೀಸರಿಗೆ ಚೆಳ್ಳೆಹಣ್ಣು ತಿನ್ನಿಸಿ ಆಂಬ್ಯುಲೆನ್ಸ್‍ನಲ್ಲಿ ಶವವನ್ನು ಬೆಂಗಳೂರಿನಿಂದ ಹಳ್ಳಿಗಳ ಮೂಲಕ ತಾಲೂಕಿನ ಆತಗೂರು ಹೋಬಳಿ ವಳಗೆರೆದೊಡ್ಡಿ ಗ್ರಾಮಕ್ಕೆ ತಂದು ಅಂತ್ಯಕ್ರಿಯೆ ನಡೆಸಲು ಪ್ರಯತ್ನ ನಡೆಸಿದ್ದರು.
ಈ ಬಗ್ಗೆ ಮಾಹಿತಿ ಅರಿತ ತಾಲೂಕು ಆಡಳಿತದ ಅಧಿಕಾರಿಗಳು ಹಾಗೂ ಪೆÇಲೀಸರು, ಜಿಲ್ಲೆಯ ಗಡೀ ಭಾಗದಲ್ಲಿ ವಾಹನವನ್ನು ತಡೆದು ಶವ ಸಮೇತ ಆ್ಯಂಬುಲೆನ್ಸ್‍ನ್ನು ವಾಪಸ್ಸು ಕಳುಹಿಸಿದ್ದಾರೆ.
ಮೂಲತಃ ಮದ್ದೂರು ತಾಲೂಕು ಆತಗೂರು ಹೋಬಳಿ, ವಳಗೆರೆದೊಡ್ಡಿ ಗ್ರಾಮದ ಜಗದೀಶ್ (42) ಬೆಂಗಳೂರು ಉತ್ತರ, ದಾಸನಪುರ ಹೋಬಳಿಯ ಗಂಗೋಡನಹಳ್ಳಿಯಲ್ಲಿ ಕಬ್ಬಿಣ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ. ಕುಡಿತದ ದಾಸನಾಗಿದ್ದ ಜಗದೀಶ ಮೇ. 13ರಂದು ರಾತ್ರಿ ತನ್ನ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದನು. ಆತನ ಪತ್ನಿ ಲಕ್ಷ್ಮಿ ನೀಡಿದ ದೂರಿನ್ವಯ ಮಾದನಾಯನಕಹಳ್ಳಿ
ಪೊಲೀಸರು ಪ್ರಕರಣ ದಾಖಲಿಸಿದ ನಂತರ ಜಗದೀಶ್ ಶವವನ್ನು ನೆಲಮಂಗಲ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿದ ನಂತರ ಶವವನ್ನು ಕುಟುಂಬದ ವಶಕ್ಕೆ ನೀಡಿದ್ದರು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss