Wednesday, August 17, 2022

Latest Posts

ಮದ್ದೂರು| ಮಳೆರಾಯನಿಗಾಗಿ ವಿಶೇಷ ಪೂಜೆ ಸಲ್ಲಿಸಿದ ಗ್ರಾಮಸ್ಥರು

ಮದ್ದೂರು: ತಾಲೂಕಿನ ಹೂತಗೆರೆ ಗ್ರಾಮದಲ್ಲಿ ಸೋಮವಾರ ಮಳೆಗಾಗಿ ಪ್ರಾರ್ಥಿಸಿ ಮಳೆರಾಯನಿಗೆ ಪೂಜೆ ಸಲ್ಲಿಸಲಾಯಿತು.
ಕೆಸ್ತೂರು ಭಾಗದಲ್ಲಿ ಈ ವರ್ಷ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ಇದರಿಂದಾಗಿ ಬೆಳೆ ಒಣಗುತ್ತಿವೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರೆಲ್ಲರೂ ಸೇರಿ ಮಳೆರಾಯನಿಗೆ ಪೂಜೆ ಸಲ್ಲಿಸುವ ಮೂಲಕ ಪ್ರಾರ್ಥನೆ ಸಲ್ಲಿಸಿದರು.

ಗ್ರಾಮದ ಬಾಲಕರು ಮಣ್ಣಿನಲ್ಲಿ ಮಳೆರಾಯನ ಮೂರ್ತಿ ಮಾಡಿ ಬಳಿಕ ಮನೆ ಬಳಿಗೆ ಹೋದರು. ನಂತರ ಮನೆಯವರು ಮಳೆರಾಯನಿಗೆ ನೀರಿನ ಸ್ನಾನ ಮಾಡಿಸಿ ಪೂಜೆ ಸಲ್ಲಿಸಿದರು. ಅಂತೆಯೇ, ತಮ್ಮಿಂದಾಗುವ ಅಕ್ಕಿ, ಬೆಲ್ಲ ಸೇರಿದಂತೆ ಆಹಾರ ಧಾನ್ಯಗಳನ್ನು ಕೊಟ್ಟರು. ಈ ಎಲ್ಲವನ್ನೂ ಸಂಗ್ರಹಿಸಿ ಗ್ರಾಮದ ಹೊರವಲಯಕ್ಕೆ ಮೂರ್ತಿಯನ್ನು ತರಲಾಯಿತು.

ಅಲ್ಲಿ ಮತ್ತೊಮ್ಮೆ ವಿಶೇಷ ಪೂಜೆ ಸಲ್ಲಿಸಲಾಯಿತು. ಹಾಗೂ ಸಂಗ್ರಹಿಸಿದ್ದ ಆಹಾರ ಧಾನ್ಯದಿಂದ ಅಡುಗೆ ಮಾಡಿ ಪ್ರಸಾದದ ರೂಪದಲ್ಲಿ ಗ್ರಾಮಸ್ಥರಿಗೆ ವಿತರಿಸಲಾಯಿತು. ಬಳಿಕ ಮಣ್ಣಿನ ಮೂರ್ತಿಯನ್ನು ಆಕಾಶದತ್ತ ನೋಡುವಂತೆ ಮುಖ ತೋರಿಸಿ ಪ್ರತಿಪ್ಠಾಪಿಸಲಾಯಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!