Saturday, August 13, 2022

Latest Posts

ಮದ್ದೂರು| ವಿಷಾಹಾರ ಸೇವನೆ: ಎರಡು ಹಸುಗಳ ಸಾವು

ಮದ್ದೂರು: ವಿಷಾಹಾರ ಸೇವಿಸಿ ಎರಡು ಹಸುಗಳು ಮೃತಪಟ್ಟಿರುವ ಘಟನೆ ತಾಲೂಕಿನ ಗೆಜ್ಜಲಗೆರೆ ಗ್ರಾಮದಲ್ಲಿ ಶನಿವಾರ ಜರುಗಿದೆ.
ಗ್ರಾಮದ ಕೆಂಪಯ್ಯ ಎಂಬುವರಿಗೆ ಸೇರಿದ ಸುಮಾರು ೨ ಲಕ್ಷ ರೂ. ಮೌಲ್ಯದ ನಾಟಿ ಹಸುಗಳು ವಿಷಹಾರ ಸೇವನೆಯಲ್ಲಿ ಅಸುನೀಗಿವೆ. ಕೆಂಪಯ್ಯ ಅವರು ಎಂದಿನoತೆ ತಮ್ಮ ಎರಡು ಹಸುಗಳಿಗೆ ಶುಕ್ರವಾರ ರಾತ್ರಿ ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ ನಂತರ ಪಶುಆಹಾರ ನೀಡಿದ್ದಾರೆ.
ಆಹಾರ ನೀಡುವ ಸ್ಥಳದಲ್ಲಿ ಗದ್ದೆಗೆ ಬಳಸುವ ರಾಸಾನಿಕ ಗೊಬ್ಬರ ಪಶು ಆಹಾರದೊಂದಿಗೆ ಮಿಶ್ರಣವಾಗಿದೆ. ಇದನ್ನು ಗಮನಿಸದ ಕೆಂಪಣ್ಣ ಅವರು, ಬೆಳಗ್ಗೆ ಹಸುಗಳಿಗೆ ಆಹಾರ ನೀಡಿದ ನಂತರ ಹಸುಗಳು ಹೊಟ್ಟೆ ಉಬ್ಬರಿಸಿಕೊಂಡು ಅಸ್ವಸ್ಥಗೊಂಡು ಕೊನೆಯುಸಿಳೆದಿವೆ.
ಪಶು ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಶವ ಪರೀಕ್ಷೆ ನಡೆಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss