Thursday, June 30, 2022

Latest Posts

ಮದ್ಯದಂಗಡಿ ಎತ್ತಂಗಡಿ ಮಾಡುವಂತೆ ಒತ್ತಾಯಿಸಿ ಕೊಪ್ಪಳ ನಗರದ ಸ್ಥಳೀಯರಿಂದ ಪ್ರತಿಭಟನೆ!

ಕೊಪ್ಪಳ: ರಾಜ್ಯಾದ್ಯಂತ ಇಂದಿನಿಂದ ಮದ್ಯ ಮಾರಾಟ ಆರಂಭವಾಗಿದೆ. ಹಲವು ದಿನಗಳ ಬಳಿಕ ಮದ್ಯದಂಗಡಿ ಓಪನ್ ಆಗುತ್ತಿದ್ದು, ಭಾರೀ ಗಮನ ಸೆಳೆದಿದೆ. ಆದರೇ ಕೆಲವರ ತೀವ್ರ ವಿರೋಧದ ನಡುವೆಯೂ ಮದ್ಯದಂಗಡಿ ಓಪನ್ ಆಗಿದ್ದು, ಓಪನ್ ಮಾಡಬಾರದು ಎಂದು ಕೊಪ್ಪಳ ನಗರದ ಸ್ಥಳೀಯರು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

ಹಲವು ದಿನಗಳ ಬಳಿಕ ಇಂದು ಮದ್ಯದಂಗಡಿಗಳು ಓಪನ್ ಆಗುತ್ತಿರುವ ವಿಚಾರ ಮದ್ಯ ಪ್ರಿಯರಿಗೆ ಹಬ್ಬದ ವಾತಾವರಣವನ್ನು ಉಂಟು ಮಾಡಿದರೆ, ಕೆಲವರು ಮದ್ಯದಂಗಡಿ ಓಪನ್ ಮಾಡಲು ಅವಕಾಶ ನೀಡಬಾರದು ಎಂದು ಪ್ರತಿಭಟನೆ ನಡೆಸಿದ್ದು ಮದ್ಯ ಪ್ರೀಯರಿಗೆ ಅಚ್ಚರಿ ಮೂಡಿಸಿದೆ.

ನಗರದ ರೈಲ್ವೆ ಸ್ಟೇಶನ್ ಬಳಿಯ ಎಂಎಸ್ ಐಎಲ್ ಅಂಗಡಿ ತೆರೆಯಲು ಸ್ಥಳೀಯರು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ ಘಟನೆ ವರಿಯಾಗಿದೆ. ಕೊಪ್ಪಳ- ಭಾಗ್ಯನಗರ ಅವಳಿ ನಗರದ ಮಧ್ಯೆ ಮೊದಲು ಮೇಲ್ಸೇತುವೆ ಇರಲಿಲ್ಲ. ಮೇಲ್ಸೇತುವೆ ಆದ ನಂತರ‌ ಎಂಎಸ್ ಐಎಲ್ ಅಂಗಡಿ ಓಣಿಯೊಳಗೆ ತೆರೆದಿದ್ದು, ಪ್ರತಿ ದಿನ ಕುಡುಕರ ಕಾಟ ಶುರುವಾಗುತ್ತಿದೆ. ಮಹಿಳೆಯರಿಗೆ ಅನಾವಶ್ಯಕ ಕಿರುಕುಳ ನೀಡಲಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.

ಕುಡಿತ ಮತ್ತಿನಲ್ಲಿ ಏನಾದರೂ ಮಾಡಬಹುದು. ಮನೆಯಲ್ಲಿ ಮಕ್ಕಳನ್ನು ಬಿಟ್ಟು ಉಳಿದವರೆಲ್ಲ ಕೆಲಸಕ್ಕೆ ಹೋಗುತ್ತೇವೆ. ಆದರೆ ಕುಡುಕರು ಕುಡಿದ‌ ಮತ್ತಿನಲ್ಲಿ ಮನೆಗೆ ನುಗ್ಗಿ ಮಕ್ಕಳಿಗೆ ತೊಂದರೆ‌ ಕೊಡುವ ಸಾಧ್ಯತೆಗಳಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss