ಶ್ರೀರಂಗಪಟ್ಟಣ : ವ್ಯಕ್ತಿಯೋರ್ವನಿಗೆ ಮದ್ಯಪಾನ ಕುಡಿಸಿ ಕೊಲೆಗೈದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಬ್ಬರನ್ನು ಬಂಧಿಸುವಲ್ಲಿ ಕೆಆರ್ಎಸ್ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.
ತಾಲೂಕಿನ ಹೊಸುಂಡವಾಡಿ ಗ್ರಾಮದ ಮಹೇಶ್ (30) ಹಾಗೂ ಅದೇ ಗ್ರಾಮದ ಕುಮಾರ್ (30) ಬಂಧಿತ ಆರೋಪಿಗಳು. ಇವರು ಸೆ.16 ರ ಸಂಜೆ 4 ಗಂಟೆ ವೇಳೆ ಮೈಸೂರು ಬೆಳವಾಗಿ ಗ್ರಾಮದ ಬೀರೇಶ್ ಎಂಬುವವರನ್ನು ಮದ್ಯಪಾನ ಮಾಡುವುದಾಗಿ ಹೇಳಿ ತಾಲೂಕಿನ ಬೆಳಗೊಳ ಬಳಯ ನಿರ್ಜನ ಪ್ರದೇಶದಲ್ಲಿ ಬಾಟಲ್ಗಳಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದರು. ಪ್ರಕರಣವನ್ನು ಭೇದಿಸಿದ ಕೆಆರ್ಎಸ್ ಠಾಣಾ ಪೊಲೀಸರು ಆರೋಪಿಗಳನ್ನು ಬಂದಿಸಿ ವಿಚಾರಣೆ ನಡೆಸಲಾಗಿ ಮೃತ ಬೀರೇಶ್ ನನ್ನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದನು ಆ ಕಾರಣ ನಾನು ಮತ್ತು ನನ್ನ ಸ್ನೇಹಿತ ಜೊತೆಗೂಡಿ ಕೊಲೆಮಾಡಿವುದಾಗಿ ಪ್ರಮುಖ ಆರೋಪಿ ಮಹೇಶ್ ತಪ್ಪೊಪ್ಪಿಕೊಂಡಿದ್ದು, ಆರೋಪಿಗಳಿಂದ ಮೃತನ ಬೈಕು ಮತ್ತು ಆರೋಪಿಗಳು ಕೊಲೆಗೆ ಉಪಯೋಗಿಸಿದ್ದ ಮೋಟಾರ್ ಬೈಕ್ ವಶಪಡಿಸಕೊಂಡು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.