ಭೋಪಾಲ್: ದೇಶದಲ್ಲಿ ಮತ್ತೆ ಕಾರ್ಮಿಕರ ಮಾರಣ ಹೋಮ ನಡೆದಿದೆ. ಮಹಾರಾಷ್ಟ್ರದಿಂದ ಸ್ವಗ್ರಾಮಕ್ಕೆ ತೆರಳುತ್ತಿದ್ದ ವಲಸೆ ಕಾರ್ಮಿಕರ ವಾಹನಕ್ಕೆ ಬಸ್ ಡಿಕ್ಕಿ ಹೊಡೆದು 8 ಮಂದಿ ಬಲಿಯಾಗಿದ್ದಾರೆ.
ರಾಜ್ಯದ ಗುನಾದ ಕ್ಯಾಂಟ್ ಪಿ.ಎಸ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಸುಮಾರು 54 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಈ ಕುರಿತು ಮಾತನಾಡಿದ ಟಿಎಸ್ ಭಾಗೇಲ್ ಎಎಸ್ಪಿ ಗುನ, 8 ಮಂದಿ ವಲಸೆ ಕಾರ್ಮಿಕರು ಅಪಘಾತದಲ್ಲಿ ಬಲಿಯಾಗಿದ್ದು, 54 ಮಂದಿ ಗಾಯಗೊಂಡಿದ್ದಾರೆ. ಈ ಅಪಘಾತದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದ್ದು, ಮರಣೋತ್ತರ ಪರೀಕ್ಷೆ ನಡೆಯುತ್ತಿದೆ ಎಂದು ತಿಳಿಸಿದರು.
8 labourers lost their lives & 54 others were injured, they are being treated at the district hospital. Postmortem & further investigation underway: TS Baghel, ASP Guna #MadhyaPradesh https://t.co/4AMD28IT5g pic.twitter.com/HL5ybGcZxp
— ANI (@ANI) May 14, 2020