Wednesday, August 17, 2022

Latest Posts

ಮದ್ಯ ಮಾರಾಟಕ್ಕೆ ಬಾಲಕನ ಬಳಕೆ: ಮಾಲೀಕರ ವಿರುದ್ಧ ಕ್ರಮಕ್ಕೆ ಆದೇಶ

ಹೊಸದಿಗಂತ ವರದಿ, ಚಿತ್ರದುರ್ಗ:

ಚಿತ್ರದುರ್ಗ ನಗರದ ಮೆದೇಹಳ್ಳಿ ರಸ್ತೆಯಲ್ಲಿನ ಮಾರುತಿ ಬಾರ್ ಮಾಲೀಕ ನಿಂಗಪ್ಪ ಮತ್ತು ಅವರ ಮಗ ಸಂತೋಷ್ 2018ರ ಅಕ್ಟೋಬರ್ 2 ರಂದು ಮದ್ಯ ಮಾರಾಟ ನಿಷೇಧಿಸಿದ್ದರೂ ಕಾನೂನು ಸಂಘರ್ಷಕ್ಕೆ ಒಳಪಟ್ಟ ಬಾಲಕನಿಂದ ಮದ್ಯ ಮಾರಾಟ ಮಾಡಿಸಿದ್ದು, ಸಾಬೀತಾಗಿರುವುದರಿಂದ ಮಾಲೀಕರ ವಿರುದ್ಧ ಕ್ರಮಕೈಗೊಳ್ಳಲು ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು, ಜೆಎಂಎಫ್‍ಸಿ ಮತ್ತು ಪ್ರಧಾನ ದಂಡಾಧಿಕಾರಿಗಳು, ಬಾಲ ನ್ಯಾಯ ಮಂಡಳಿ ಚಿತ್ರದುರ್ಗ ಇವರು ಆದೇಶಿಸಿರುತ್ತಾರೆ.
ಮಾಲೀಕ ನಿಂಗಪ್ಪ ಕಾನೂನು ಬಾಹಿರವಾಗಿ ಬಾಲಕನನ್ನು ಬಾರ್‍ನಲ್ಲಿ ಕೆಲಸಕ್ಕೆ ಇಟ್ಟುಕೊಂಡು 2018ರ ಅಕ್ಟೋಬರ್ 02 ರಂದು ಬಾರ್ ಹಿಂಭಾಗದ ರಸ್ತೆಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಿಸಿರುವುದು ಸಾಬೀತಾಗಿರುತ್ತದೆ. ಆದ್ದರಿಂದ ಮಾಲೀಕರ ಮೇಲೆ ಕ್ರಮ ಕೈಗೊಳ್ಳಲು ಆದೇಶಿಸಲಾಗಿದೆ. ಈ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಪೊಲೀಸ್ ಅಧೀಕ್ಷಕರಿಗೆ ನಿರ್ದೇಶಿಸಲಾಗಿರುತ್ತದೆ ಎಂದು ಸರ್ಕಾರಿ  ವೀಕ್ಷಣಾಲಯದ ಅಧೀಕ್ಷಕರಾದ ಕರಿಬಸವಯ್ಯ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!