Tuesday, June 28, 2022

Latest Posts

ಮದ್ರಾಸ್ ಹೈಕೋರ್ಟ್ ನಲ್ಲಿ ನ್ಯಾಯಾಧೀಶರಾಗಿ ಒಟ್ಟಿಗೆ ಪ್ರಮಾಣವಚನ ಸ್ವೀಕರಿಸಿದ ದಂಪತಿ!

ಹೊಸದಿಗಂತ ಆನ್ ಲೈನ್ ಡೆಸ್ಕ್:

ಮದ್ರಾಸ್ ಹೈ ಕೋರ್ಟ್ ಗುರುವಾರ ಒಂದು ಅಪರೂಪದ ಸಂದರ್ಭಕ್ಕೆ ಸಾಕ್ಷಿಯಾಗಿದೆ.

ಹೌದು, ಮದ್ರಾಸ್ ಹೈಕೋರ್ಟ್ ನ ನ್ಯಾಯಾಧೀಶರಾಗಿ ಪತಿ ಪತ್ನಿ ಇಬ್ಬರು ಜೊತೆಯಾಗಿ ಪ್ರಮಾಣವಚನ ಸ್ವೀಕಾರ ಮಾಡಿರುವ ಅಪರೂಪದ ಘಟನೆ ನಡೆದಿದೆ. ನ್ಯಾ. ಮುರಳಿಶಂಕರ್ ಕುಪ್ಪುರಾಜು ಹಾಗೂ ನ್ಯಾ. ತಮಿಲ್ ಸೆಲ್ವಿ ಟಿ. ವಲಯಾಪಾಲಯಂ ದಂಪತಿಗಳು ಒಟ್ಟಿಗೆ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ.

ಪ್ರಮಾಣವಚನ ಉಪದೇಶಿಸಿದ ಅಡ್ವೊಕೇಟ್ ಜನರಲ್ ವಿಜಯ್ ನಾರಾಯಣ್ ಮಾತನಾಡಿ, ಮದ್ರಾಸ್ ಹೈಕೋರ್ಟ್ ನಲ್ಲಿ ಇದೇ ಮೊದಲ ಬಾರಿಗೆ ದಂಪತಿಗಳು ಒಟ್ಟಿಗೆ ನ್ಯಾಯಾಧೀಶರಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ.
ದಂಪತಿಗಳು ಒಂದೇ ಸಮಯದಲ್ಲಿ ಉಪ ನ್ಯಾಯಾಧೀಶರು, ಜಿಲ್ಲಾ ನ್ಯಾಯಾಧೀಶರು ಮತ್ತು ನಂತರ ಪ್ರಧಾನ ಜಿಲ್ಲಾ ನ್ಯಾಯಾಧೀಶರ ಕಾರ್ಯಕರ್ತರಾಗಿ ಬಡ್ತಿ ಪಡೆದಿದ್ದರು.

ದಂಪತಿಗಳ ಜೊತೆಗೆ ಕನ್ನಮ್ಮಲ್ ಷಣ್ಮುಗಸುಂದರಂ, ಸತ್ಯಕುಮಾರ್ ಸುಕುಮಾರ ಕುರುಪ್, ಮಂಜುಳ ​​ರಾಮರಾಜು ನಲ್ಲಯ್ಯ, ಜಿ.ಚಂದ್ರಶೇಖರನ್, ಎ.ಎ. ನಕ್ಕೀರನ್, ಶಿವಜ್ಞನಂ ವೀರಸಾಮಿ, ಇಲಂಗೋವನ್ ಗಣೇಶನ್ ಮತ್ತು ಅನಂತಿ ಸುಬ್ರಮಣಿಯನ್ ಕೂಡ ನ್ಯಾಯಾಧೀಶರಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss