ಭೋಪಾಲ್: ನೂತನ ಏಕೀಕೃತ ವಾಹನ ನೋಂದಣಿ ಕಾರ್ಡ್ ವ್ಯವಸ್ಥೆಯನ್ನು ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್ನಾಥ್ ಅವರು ಮಂಗಳವಾರ ಅನಾವರಣಗೊಳಿಸಿದ್ದಾರೆ. ಈ ಮೂಲಕ ದೇಶದಲ್ಲಿಯೇ ಮೊದಲ ಬಾರಿ ಈ ವ್ಯವಸ್ಥೆ ಜಾರಿಗೆ ತಂದ ರಾಜ್ಯ ಎಂಬ ಖ್ಯಾತಿಗೆ ಮಧ್ಯಪ್ರದೇಶ ಪಾತ್ರವಾಗಿದೆ.
ಕಾರ್ಡ್ ಅನಾವರಣದ ಬಳಿಕ ಅವರು ಮಾತನಾಡಿದ್ದು, ದೇಶದಲ್ಲಿಯೇ ಏಕೀಕೃತ ವಾಹನ ನೋಂದಣಿ ಕಾರ್ಡ್ ವ್ಯವಸ್ಥೆಯನ್ನು ಮೊದಲ ಬಾರಿ ನಮ್ಮ ರಾಜ್ಯ ಜಾರಿಗೊಳಿಸಿದೆ. ಈ ಮೊದಲು ಏಕೀಕೃತ ಚಾಲನಾ ಪರವಾನಗಿ ಕೂಡ ಜಾರಿಗೆ ತರಲಾಗಿತ್ತು ಎಂದು ಹೇಳಿದ್ದಾರೆ. ಆರು ಮಂದಿಗೆ ಔಪಚಾರಿಕವಾಗಿ ಏಕೀಕೃತ ವಾಹನ ನೋಂದಣಿ ಕಾರ್ಡ್ ಮತ್ತು ಪರವಾನಗಿ ಕಾರ್ಡ್ ವಿತರಿಸಲಾಗಿದೆ.