ಹೊಸದಿಗಂತ ಆನ್ ಲೈನ್ ಡೆಸ್ಕ್:
ಮಧ್ಯಪ್ರದೇಶ ಉಪಚುನಾವಣೆಯಲ್ಲಿ ಬಿಜೆಪಿ 18 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
ಕಾಂಗ್ರೆಸ್ ೯ ಕ್ಷೇತ್ರಗಳ ಪೈಕಿ ಮುನ್ನಡೆ ಸಾಧಿಸಿದೆ. ಮಧ್ಯಪ್ರದೇಶದಲ್ಲಿ ಆಡಳಿತರೂಢ ಬಿಜೆಪಿ ೨೮ ವಿಧಾನಸಭಾ ಕ್ಷೇತ್ರಗಳ ಪೈಕಿ 18 ರಲ್ಲಿ ಮುನ್ನಡೆ ಪಡೆದಿದೆ. ಕಾಂಗ್ರೆಸ್ 9 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ಬಿಜೆಪಿಯ ತುಳಸಿರಾಮ್ ಸಿಲಾವತ್ ಸ್ಯಾನ್ವರ್ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದು, ರಾಜವರ್ಧನ್ ಸಿಂಗ್ ದಟ್ಟಿಗಾಂವ್ ಬದ್ನವಾರ್ನಲ್ಲಿ, ಮುಂಗೋಲಿಯ ಬ್ರಜೇಂದ್ರ ಸಿಂಗ್ ಯಾದವ್, ಬಯೋರಾದ ನಾರಾಯಣ್ ಸಿಂಗ್ ಪವಾರ್, ಸುವಸಾರಾದ ಹರ್ದೀಪ್ ಸಿಂಗ್ ಡಂಗ್ ಮತ್ತು ಅಶೋಕ್ ನಗರದಿಂದ ಅಜೋಕ್ ನಗರದಿಂದ ಜಜ್ಪಾಲ್ ಸಿಂಗ್ ಜಜ್ಜಿ ತಮ್ಮ ಎದುರಾಳಿಗಳ ವಿರುದ್ಧ ಮುನ್ನಡೆ ಸಾಧಿಸಿದ್ದಾರೆ.
ಅಗಾರ್ ಮತ್ತು ಹಟ್ಪಿಪಾಲ್ಯಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ನ ವಿಪಿನ್ ವಾಂಖೆಡೆ ಮತ್ತು ರಾಜೇಂದ್ರ ಸಿಂಗ್ ಬಘೇಲಾ ಮುನ್ನಡೆ ಸಾಧಿಸಿದ್ದಾರೆ.