Saturday, August 13, 2022

Latest Posts

ಮಧ್ಯಪ್ರದೇಶ ಉಪ ಚುನಾವಣೆ: ಸ್ಪಷ್ಟ ಬಹುಮತದತ್ತ ಮುನ್ನುಗುತ್ತಿದೆ ಬಿಜೆಪಿ

ಹೊಸ ದಿಗಂತ ಆನ್ ಲೈನ್ ಡೆಸ್ಕ್ :

ಮಧ್ಯಪ್ರದೇಶದ 28 ಸ್ಥಾನಗಳಿಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, 230 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿಗೆ ಬಹುತೇಕ ಸ್ಪಷ್ಟ ಬಹುಮತ ದೊರೆಯುವುದು ಖಚಿತವಾಗಿದೆ.
ಸದ್ಯ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದ್ದು, ಇಂದು ಮಧ್ಯಾಹ್ನದವರೆಗೂ ಬಿಜೆಪಿ 19, ಕಾಂಗ್ರೆಸ್ 8 ಮತ್ತು ಬಿಎಸ್ ಪಿ ಒಂದು ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿವೆ.
ಬಿಜೆಪಿ ರಾಜ್ಯಸಭಾ ಸದಸ್ಯ ಜ್ಯೋತಿರಾದಿತ್ಯ ಸಿಂಧಿಯಾ ಅವರ ಸ್ವಕ್ಷೇತ್ರ ಗ್ವಾಲಿಯಾರ್ – ಚಂಬಲ್ ಪ್ರದೇಶದಲ್ಲಿ 8-10 ಸ್ಥಾನಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ಕಂಡುಬರುತ್ತಿದೆ. ಚುನಾವಣೆ ನಡೆದ 28 ಸ್ಥಾನಗಳ ಪೈಕಿಯಲ್ಲಿ 16 ಸ್ಥಾನಗಳನ್ನು ಗ್ವಾಲಿಯರ್ – ಚಂಬಲ್ ವಲಯದಲ್ಲಿಯೇ ಇವೆ. ಮೊರೆನಾ ಜಿಲ್ಲೆಯಲ್ಲಿ ಐದು ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧಿಸಿದ್ದು, ಕಡಿಮೆ ಅಂತರೊಂದಿಗೆ ಮುನ್ನಡೆಯಲ್ಲಿದೆ.
ಬಿಜೆಪಿಯ ಅಭಿವೃದ್ಧಿ ಮತ್ತು ಸಾರ್ವಜನಿಕರ ಕಲ್ಯಾಣ ರಾಜಕೀಯಕ್ಕೆ ಜನರು ಮತ ಚಲಾಯಿಸಿದ್ದಾರೆ ಎಂಬ ಪ್ರವೃತ್ತಿಗಳು ಸ್ಪಷ್ಟವಾಗಿ ಬಿಂಬಿಸುತ್ತವೆ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹ್ಹಾಣ್ ಟ್ವೀಟ್ ಮಾಡಿದ್ದಾರೆ.
ಸಂಜೆಯವರೆಗೂ ಇದೇ ರೀತಿಯಲ್ಲಿ 19-20 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಮುಂದುವರೆದರೆ ಮಧ್ಯಪ್ರದೇಶ ವಿಧಾನಸಭೆಯಲ್ಲಿ ಬಿಜೆಪಿಗೆ ಸ್ಪಷ್ಟ ಸರಳ ಬಹುಮತ ಸಿಕ್ಕಂತಾಗಲಿದೆ. ಬಿಜೆಪಿ ಪ್ರಸ್ತುತ 107 ಸ್ಥಾನಗಳನ್ನು ಹೊಂದಿದ್ದು, ಸರಳ ಬಹುಮತಕ್ಕೆ ಇನ್ನೂ 9 ಸ್ಥಾನಗಳ ಅಗತ್ಯವಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss