Wednesday, July 6, 2022

Latest Posts

ಮಧ್ಯಪ್ರದೇಶ ಸರಕಾರದಿಂದ ಗೋವುಗಳ ರಕ್ಷಣೆಗೆ ‘ಹಸು ಕ್ಯಾಬಿನೆಟ್’

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಮಧ್ಯಪ್ರದೇಶ ರಾಜ್ಯದಲ್ಲಿನ ಹಸುಗಳ ರಕ್ಷಣೆಗಾಗಿ ‘ಹಸು ಕ್ಯಾಬಿನೆಟ್’ ರಚಿಸಲು ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಹಸುಗಳ ರಕ್ಷಣೆ ಮತ್ತು ಪೋಷಣೆಗೆ ‘ಹಸು ಕ್ಯಾಬಿನೆಟ್’ ಸ್ಥಾಪಿಸಲು ನಿರ್ಧರಿಸಲಾಗಿದೆ. ಪಶುಸಂಗೋಪನೆ, ಅರಣ್ಯ, ಪಂಚಾಯತ್ ಮತ್ತು ಗ್ರಾಮೀಣಾಭಿವೃದ್ಧಿ, ಕಂದಾಯ, ಗೃಹ ಮತ್ತು ರೈತ ಕಲ್ಯಾಣ ಇಲಾಖೆ ‘ಹಸು ಕ್ಯಾಬಿನೆಟ್’ನ ಒಂದು ಭಾಗವಾಗಲಿದೆ.
ಅಗರ್ ಮಾಲ್ವಾದ ಗೋ ಅಭಯಾರಣ್ಯದಲ್ಲಿ ನವೆಂಬರ್ 22ರಂದು  ಮಧ್ಯಾಹ್ನ 12 ಗಂಟೆಗೆ ಮೊದಲ ಕ್ಯಾಬಿನೆಟ್​ ಸಭೆ ನಡೆಯಲಿದೆ ಎಂದು ಮುಖ್ಯಮಂತ್ರಿ ಟ್ವಿಟರ್​ನಲ್ಲಿ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss