ಅನ್ನ ಸಾರು ಅಥವಾ ಮೊಸರನ್ನದ ಜೊತೆ ನೆಂಚಿಕೆಗೆ ಏನು ಮಾಡೋದು ಅಂತ ಯೋಚನೆ ಮಾಡ್ತಿದ್ದೀರಾ? ಈಸಿಯಾದ ಆಲೂ ಫ್ರೈ ಮಾಡಿ. ಇದು ನೆಂಚಿಕೆಗೆ ಅಷ್ಟೇ ಅಲ್ಲ, ಸಂಜೆ ಸ್ನಾಕ್ಸ್ಗೂ ಕೂಡ ಹೇಳಿ ಮಾಡಿಸಿದ್ದು. ಹೇಗೆ ಮಾಡೋದು ಈ ಆಲೂ ಫ್ರೈ? ಇಲ್ಲಿದೆ ರೆಸಿಪಿ..
ಬೇಕಾಗಿರುವ ಸಾಮಾಗ್ರಿಗಳು
- ಕರಿಬೇವು
- ಆಲೂಗಡ್ಡೆ
- ಉಪ್ಪು
- ಖಾರದ ಪುಡಿ
ಮಾಡುವ ವಿಧಾನ - ಮೊದಲು ಆಲೂಗಡ್ಡೆ ಸಿಪ್ಪೆ ತೆಗೆದು ಕ್ಯೂಬ್ ಮಾಡಿ ಕತ್ತರಿಸಿ.
- ನಂತರ ತಣ್ಣ ನೀರಿನಲ್ಲಿ ಐದು ನಿಮಿಷ ಇಡಿ.
- ನಂತರ ಪ್ಯಾನ್ನಲ್ಲಿ ಸ್ವಲ್ಪ ಎಣ್ಣೆ ಹಾಕಿ.
- ಇದಕ್ಕೆ ಕರಿಬೇಕು ಹಾಕಿ, ನಂತರ ಹೆಚ್ಚಿದ ಆಲೂಗಡ್ಡೆ ಹಾಕಿ.
- ಸಣ್ಣ ಉರಿಯಲ್ಲಿ ಆಲೂಗಡ್ಡೆ ಬ್ರೌನ್ ಆಗುವವರೆಗೂ ಕಾಯಿರಿ.
- ನಂತರ ಅದಕ್ಕೆ ಉಪ್ಪು ಖಾರ ಮೇಲೆ ಉದುರಿಸಿದರೆ ಆಲೂ ಫ್ರೈ ರೆಡಿ..