ವಿಜಯಪುರ: ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಗ್ರಾಮ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಬುಧವಾರ ರಾತ್ರಿ ಭೂಕಂಪನವಾದ ಲಕ್ಷಣ ಕಂಡು ಬಂದಿಲ್ಲ, ಸಾರ್ವಜನಿಕರು ಯಾವುದೇ ರೀತಿ ಭೀತಿಗೊಳ್ಳಬಾರದು ಎಂದು ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಹೇಳಿದ್ದಾರೆ.
ಈ ಕುರಿತು ಸ್ಪಷ್ಟಪಡಿಸಿರುವ ಅವರು, ಮನಗೂಳಿ ಗ್ರಾಮದ ಭಾಗದಲ್ಲಿ ಬುಧವಾರ ರಾತ್ರಿ 11.30 ಕ್ಕೆ ಎರಡು- ಮೂರು ಸೆಕೆಂಡುಗಳ ಕಾಲ ಭೂಕಂಪನವಾಗಿರುವ ಅನುಭವವಾಗಿದೆ ಎಂದು, ಇಲ್ಲಿನ ಜನರು ಭಯಭೀತಿಗೊಂಡ ಹಿನ್ನೆಲೆ, ಕೆಎಸ್ ಎನ್ ಡಿಎಂಸಿ ಅಧಿಕಾರಿಗಳು ಹಾಗೂ ಆಲಮಟ್ಟಿಯ ಭೂಕಂಪನ ದಾಖಲೆ ಕೇಂದ್ರ ಅಧಿಕಾರಿಗಳು, ಮನಗೂಳಿ ಗ್ರಾಮ ಭಾಗದಲ್ಲಿ ಯಾವುದೇ ರೀತಿ ಭೂಕಂಪನ ಲಕ್ಷಣ ಕಂಡು ಬಂದಿಲ್ಲ ಎಂದು ದೃಢೀಕರಿಸಿದ್ದಾರೆ. ಆದ್ದರಿಂದ ಸಾರ್ವಜನಿಕರು ಯಾವುದೇ ರೀತಿ ಆತಂಕ ಪಡಬಾರದು ಎಂದು ಅವರು ತಿಳಿಸಿದ್ದಾರೆ.