spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, December 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮನೆಕೆಲಸ ಕೇವಲ ಹೆಂಡತಿಯ ಹೊಣೆಯಲ್ಲ: ಪತಿ-ಪತ್ನಿ ಸೇರಿ ಕೆಲಸ ಮಾಡಿದರೆ ಎಷ್ಟೆಲ್ಲಾ ಲಾಭಗಳಿವೆ ನೋಡಿ..

- Advertisement -Nitte

ನಾವು ಆಫೀಸಿನಲ್ಲಿ ದುಡಿದು ಬರುತ್ತೇವೆ. ಮನೆಯಲ್ಲಿ ಏಕೆ ಕೆಲಸ ಮಾಡಬೇಕು. ಕೆಲಸ ಮಾಡುವುದು ಹೆಂಡತಿಯ ಕೆಲಸ. ಈ ರೀತಿ ಮನೋಭಾವ ಹಲವರಲ್ಲಿದೆ. ಕೆಲವು ಹೆಣ್ಣುಮಕ್ಕಳು ತಮ್ಮ ಗಂಡನನ್ನು ಸುಖವಾಗಿರಿಸಿಕೊಳ್ಳಲು ಅವನಿಗೆ ನೆಮ್ಮದಿ ಕೊಡುವುದು ಮುಖ್ಯ. ಮನೆ ಶುಚಿಯಾಗಿದ್ದರೆ, ರುಚಿಯಾದ ಅಡುಗೆ ಕೊಟ್ಟರೆ ಅವರನಿಗೆ ಸಂತೋಷವಾಗುತ್ತದೆ ಎಂದುಕೊಳ್ಳುತ್ತಾರೆ. ಆದರೆ ತಮ್ಮ ಬಗ್ಗೆ ಅವರು ಯೋಚಿಸುವುದಿಲ್ಲ. ಅವರು ಗಂಡನಂತೆಯೇ ಕೆಲಸಕ್ಕೆ ಹೋಗಿ ಬಂದರೂ ಮನೆಯ ಕೆಲಸ ನಮ್ಮದೇ ಜವಾಬ್ದಾರಿ ಎಂದುಕೊಳ್ಳುತ್ತಾರೆ. ಗಂಡ ಬಂದು ತಮಗೆ ಸಣ್ಣ ಪುಟ್ಟ ಸಹಾಯ ಮಾಡಲಿ ಎಂದು ಮನಸಿದ್ದರೂ ಹೇಳಿಕೊಳ್ಳುವುದಿಲ್ಲ. ಆದರೆ ಇದನ್ನು ಗಂಡನೇ ಅರ್ಥ ಮಾಡಿಕೊಂಡು ಸಹಿಕರಿಸಿದರೆ ಎಷ್ಟೆಲ್ಲಾ ಲಾಭಗಳಿವೆ ನೋಡಿ..

  • ಕೆಲಸ ಮಾಡುವುದು ಎಂದರೆ, ತುಂಬಾ ಮಾಡಬೇಕು ಎಂದಲ್ಲ, ಹೆಂಡತಿ ಪಲ್ಯ ಮಾಡೋಣ ಎಂದರೆ, ತರಕಾರಿ ಹೆಚ್ಚಿಕೊಡಬೇಕು. ಆಫೀಸಿನಲ್ಲಿ ನಡೆದ ವಿಷಯಗಳನ್ನು ಇಬ್ಬರು ವಿನಿಮಯ ಮಾಡಿಕೊಳ್ಳಬೇಕು. ಇದರಿಂದ ನಿಮ್ಮ ಬಾಂಧವ್ಯ ಹೆಚ್ಚುತ್ತದೆ.
  • ಪ್ರೀತಿಗೆ ಮಾತೇ ಮುಖ್ಯ. ಸಂವಹನ ಇಲ್ಲದೆ ಪ್ರೀತಿ ಇಲ್ಲ ಎಂದೇನೂ ಅಲ್ಲ. ಆದರೆ ಮಾತುಕತೆಯಿಂದ ಎಷ್ಟೋ ಸಮಸ್ಯೆ ಬಗೆಹರಿಯುತ್ತದೆ. ನೀವು ಮನಸ್ಸಿನಲ್ಲಿ ಒಂದು ಅಂದುಕೊಳ್ಳುವುದು, ಅವರು ಇನ್ನೇನೋ ಅಂದುಕೊಳ್ಳುವುದು. ನಮಗೆ ನಾವೇ ಏನೋ ಅಂದುಕೊಂಡು ಸುಮ್ಮನಾಗುವುದು ಇದರಿಂದ ಮನಸ್ಸು ಕಸದ ಡಬ್ಬಿಯಂತಾಗುತ್ತದೆ. ಆಗಾಗ ಕಸ ಬಿಸಾಡದಿದ್ದರೆ ಮನೆ ಪರಿಸ್ಥಿತಿ ಹೇಗಿರುತ್ತದೆ ಊಹಿಸಿ?
  • ಅವಳು ನಿಮ್ಮಂತೆ ಹೊರಗೆ ದುಡಿಯುತ್ತಾಳೆ. ಕೆಲವೊಮ್ಮೆ ನೀವು ಕೆಲಸ ಮಾಡುವುದೇ ಬೇಡ, ಕೆಲಸ ಮಾಡಬೇಕೆ ಎಂದು ಕೇಳಿ ಸಾಕು. ಅವಳಿಗೆ ಅಷ್ಟೇ ಸಾಕು. ನಿಮಗಿಂತ ಹೆಚ್ಚು ಕೆಲಸ ಅವಳು ಮಾಡುತ್ತಾಳೆ. ಅವಳಿಗೆ ಸಹಾಯ ಮಾಡುವುದು ನಿಮ್ಮ ಕರ್ತವ್ಯ.
  • ಹೆಣ್ಣು ಮಕ್ಕಳು ಮನೆಯಲ್ಲಿರುತ್ತಾರೆ, ಅವರಿಗಿನ್ನೇನು ಕೆಲಸ, ಮನೆ ಸರಿಯಾಗಿಟ್ಟುಕೊಂಡರೆ ಸಾಕು ಎಂದು ಕೆಲ ಗಂಡಸರು ಯೋಚಿಸುತ್ತಾರೆ. ಆದರೆ ಮನೆ ಕೆಲಸ ಸುಲಭವಲ್ಲ. ಅದರ ಕಷ್ಟ ಅರಿಯಾದರೂ ಸಹಾಯ ಮಾಡಿ ನೋಡಿ. ನಂತರದ ನಿರ್ಧಾರ ನಿಮ್ಮದು.
  • ನಿಮ್ಮ ಮಕ್ಕಳು ನಿಮ್ಮದೇ ಛಾಯೆ. ನೀವು ಮಾಡಿದ್ದನ್ನೇ ಅವರು ಮಾಡುತ್ತಾರೆ. ನೀವು ಸಮಾಜಕ್ಕೆ ಒಂದು ಸಂದೇಶವನ್ನೇ ನೀಡುತ್ತಿರುತ್ತೀರಿ.ನೀವು ನಿಮ್ಮ ಹೆಂಡತಿಯನ್ನು ನೋಡಿಕೊಂಡ ಹಾಗೆ ಮುಂದೆ ಅವರು ಅವರ ಹೆಂಡತಿಯನ್ನು ನೋಡಿಕೊಳ್ಳುತ್ತಾರೆ. ಹಾಗಾಗಿ ಮದುವೆ ಎಂಬದು ಇಬ್ಬರೂ ಸೇರಿದರೆ ಮಾತ್ರ ಎನ್ನುವುದನ್ನು ನೀವು ಅವರಿಗೆ ತೋರಿಸಿಕೊಡಿ.
  • ಕೆಲಸ ಮಾಡುವುದು ಅಷ್ಟೇನೂ ಕೆಟ್ಟ,ಕಷ್ಟದ ಕೆಲಸವಲ್ಲ. ಮನೆ ನಿಮ್ಮದು.ಅವಳದ್ದು ಮಾತ್ರ ಅಲ್ಲ. ನಿಮ್ಮ ಮನೆಯನ್ನು ನೀವು ಪ್ರೀತಿಸಿ. ನಿಮ್ಮ ಮನೆ ಕೆಲಸ ನೀವು ಮಾಡಲು ಸಂಕೋಚ ಏಕೆ?
  • ಕೆಲಸವರಿಗೆ ಮನೆ ಕೆಲಸ ಮಾಡುತ್ತೇವೆ, ಅಡುಗೆ ಮಾಡಲು ಬರುತ್ತದೆ ಎಂದು ಹೇಳಿಕೊಳ್ಳಲು ಮುಜುಗರ. ಆದರೆ ಈ ಮನೋಭಾವಿದಿಂದ ಹೊರಬನ್ನಿ. ನಿಮ್ಮ ಮನೆಯ ಕೆಲಸ ಮಾಡಿಕೊಡಲು ಆಡಿಕೊಂಡವರು ಬರುವುದಿಲ್ಲ. ನಿಮ್ಮ ಹೆಂಡತಿಗೆ ನೀವೇ ಆಗಬೇಕು.
- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss