ಮನೆಗೆ ಆಮೀರ್ ಬಂದಿದ್ರು…. ಮೊಸರನ್ನ ಮಾಡಿಕೊಟ್ಟಿದ್ರು… ನೆನಪುಗಳ ಮಾತು ಮಧುರ ಎಂದ ದೀಪಿಕಾ!

0
373

ಮುಂಬೈ: ಸುಮಾರು 20 ವರ್ಷ ಹಳೆಯ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ತಮ್ಮ ಅಭಿಮಾನಿಗಳನ್ನು ಆಚ್ಚರಿಗೆ ತಳ್ಳಿದ್ದಾರೆ.
2000 ಇಸವಿಯ ಜನವರಿಯಲ್ಲಿ ತಮ್ಮ ಮನೆಗೆ ಭೇಟಿ ನೀಡಿದ್ದ ಬಾಲಿವುಡ್​ ನಟ ಆಮೀರ್​ ಖಾನ್​ ಅವರೊಂದಿಗೆ ದೀಪಿಕಾ ತಾಯಿ ಉಜ್ವಲ ಪಡುಕೋಣೆ, ತಂಗಿ ಅನಿಷಾ ಪಡುಕೋಣೆ, ಪ್ರಕಾಶ ಪಡುಕೋಣೆ ಗ್ರೂಪ್‌ ಫೋಟೋಕ್ಕೆ ಪೋಸ್‌ ನೀಡಿದ್ದರು. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ದೀಪಿಕಾ, ಆಮೀರ್ ತಮ್ಮ ಮನೆಯಲ್ಲಿ ಮೊಸರನ್ನ ತಯಾರಿಸಿದ್ದನ್ನೂ ನೆನಪಿಸಿಕೊಂಡಿದ್ದಾರೆ. ಈ ಫೋಟೋ ತೆಗೆಯುವ ಸಂದರ್ಭ ನನಗೆ ನನಗೆ ತುಂಬಾ ಹೊಟ್ಟೆ ಹಸಿವಾಗಿತ್ತು. ನೆನಪುಗಳನ್ನು ಮತ್ತೆ ಮತ್ತೆ ನೆನಪು ಮಾಡುಕೊಳ್ಳುವುದೇ ಒಂದು ರೀತಿಯಾದ ಖುಷಿಯ ಸಂಗತಿ ಎಂದೂ ಅವರು ಬರೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here