ಮನೆಗೆ ಕಳ್ಳ ಬಂದರೆ ಏನು ಮಾಡುವುದು? ನಾವು ಮನೆಯಲ್ಲಿ ಇಲ್ಲದಿದ್ದಾಗ ಬಂದು ಹೋದರೆ ನಾವು ಅದರಲ್ಲಿ ಏನು ಮಾಡಲಾಗುವುದಿಲ್ಲ. ಅದೇ ನಾವು ಮನೆಯಲ್ಲೇ ಇದ್ದಾಗ ಕಳ್ಳ ಬಂದರೆ? ಈ ರೀತಿ ಆಗುವುದು ಬೇಡ. ಆದರೆ ಈ ಪರಿಸ್ಥಿತಿ ಬರುವುದೇ ಇಲ್ಲ ಎನ್ನಲಾಗುವುದಿಲ್ಲ. ಪರಿಸ್ಥಿತಿಗೆ ನಾವು ತಯಾರಾಗಿರುವುದು ಮುಖ್ಯವಾಗುತ್ತದೆ. ಹಾಗಾದರೆ ಏನು ಮಾಡಬೇಕು? ಹೇಗೆ ನಾವು ಪ್ರಿಪೇರ್ ಆಗಬೇಕು ನೋಡಿ..
- ಕಳ್ಳ ಇರುವುದು ನಿಜವಾ?: ಮೊದಲು ಅವರು ಇರುವುದನ್ನು ಪಕ್ಕಾ ಮಾಡಿಕೊಳ್ಳಿ. ಮನೆಯೊಳಗೆ ಏನೋ ಸದ್ದು ಬರುತ್ತಿದೆ ಎನಿಸಬಹುದು. ಆದರೆ ಅದು ಇಲಿಯೋ ಹೆಗ್ಗಣವೋ ಆಗಿರಬಹುದು. ಮೊದಲು ಅದನ್ನು ಕನ್ಫರ್ಮ್ ಮಾಡಿಕೊಳ್ಳಿ. ಮಾಮೂಲಿಯಾಗಿ ಕಳ್ಳರ ನಡೆ ಸಾಮಾನ್ಯವಾಗಿರುವುದಿಲ್ಲ. ಅದನ್ನು ನೋಡಿ..
- ಕೂಲ್ ಆಗಿರಿ: ಪ್ಯಾನಿಕ್ ಆಗಬೇಡಿ. ನೀವು ಪ್ಯಾನಿಕ್ ಆದರೆ ಕೆಲಸ ಕೆಡುತ್ತದೆ. ಇದು ಮಾಮೂಲಿ ಪರಿಸ್ಥಿತಿ ಅಲ್ಲ. ನಿಮ್ಮ ಜೊತೆಗೆ ನಿಮ್ಮ ಪ್ರೀತಿ ಪಾತ್ರರೂ ಮನೆಯಲ್ಲಿ ಇರುತ್ತಾರೆ. ಅವರ ಹೊಣೆಯೂ ನಿಮ್ಮ ದೇ ಆಗಿರುತ್ತದೆ. ನೀವು ಕೂಲ್ ಆಗಿರಿ. ದೀರ್ಘವಾಗಿ ಉಸಿರಾಡಿ, ರಿಲ್ಯಾಕ್ಸ್ ಆದರೆ ಮಾತ್ರ ನಿಮ್ಮ ಬ್ರೇನ್ ನಾರ್ಮಲ್ ಆಗಿ ಯೋಚಿಸುತ್ತದೆ. ಮುಂದೆ ಏನು ಮಾಡಬೇಕು? ಕಳ್ಳ ಇನ್ನು ಮುಂಬಾಗಿಲ ಬಳಿ ಇದ್ದರೆ ನೀವು ಒಮದು ಜಾಗದಲ್ಲಿ ಸೇರಿಕೊಂಡು ಯಾವುದಾದರೂ ಹರಿತವಾದ ವಸ್ತುಗಳನ್ನು ನಿಮ್ಮ ಸೇಫ್ಟಿಗಾಗಿ ಜೊತೆಗಿಟ್ಟುಕೊಳ್ಳಿ.
- ನೀವು ಎಸ್ಕೇಪ್ ಆಗಬಹುದಾ?: ನಿಮ್ಮ ಮನೆಗೆ ಎಸ್ಕೇಪ್ ಡೋರ್ ಇದೆಯಾ? ಅವರಾಗಲೇ ಮನೆಯೊಳಗೆ ಬಂದಾಗಿದ್ದರೆ, ತಕ್ಷಣ ಎಸ್ಕೇಪ್ ಡೋರ್ ಹುಡುಕಿ ಹೊರಹೋಗಿ. ಕಿಟಕಿಯಲ್ಲಿ ಹೊರಹೋಗಲು ಆಗುತ್ತದಾ ನೋಡಿ..
- ಎಸ್ಕೇಪ್ ಆಗಲು ಆಗದಿದ್ದರೆ?: ನಿಮ್ಮ ನೆಯ ಯಾವುದೇ ವಿಂಡೋ ಅಥವಾ ಬಾಗಿಲಿನಿಂದ ಎಸ್ಕೇಪ್ ಆಗಲು ಆಗದಿದ್ದರೆ, ಎಲ್ಲಿದ್ದೀರೋ ಅಲ್ಲೇ ಇದ್ದುಬಿಡಿ. ಬಾತ್ರೂಂ ಅಥವಾ ಬೆಡ್ರೂಂ ಕಬೋರ್ಡ್ನಲ್ಲಿ ಸೇರಿಕೊಳ್ಳಿ.
- ಪೊಲೀಸರಿಗೆ ಕರೆ ಮಾಡಿ: ನಿಮ್ಮ ಮೊಬೈಲ್ ಯಾವಾಗಲೂ ನಿಮ್ಮ ಜೊತೆ ಇರಲಿ. ಅದನ್ನು ಸೈಲೆಂಟ್ ಮೋಡ್ಗೆ ಹಾಕಿಟ್ಟಿರಿ. ಅವರು ನಿಮ್ಮ ಮನೆ ಪ್ರವೇಶಿಸುತ್ತಿದ್ದಾರೆ ಎಂದು ತಿಳಿಯುತ್ತಿದ್ದಂತೆಯೇ ಪೊಲೀಸರಿಗೆ ಕರೆ ಮಾಡಿ. ಮೆಲ್ಲಗೆ ಮಾತನಾಡಿ. ಅವರು ಯಾವ ರೀತಿ ಎಮರ್ಜೆನ್ಸಿ ಎಂದು ಕೇಳುತ್ತಾರೆ. ಅದಕ್ಕೆ ಎಲ್ಲ ಪ್ರಿಪೇರ್ ಆಗಿರಿ.
- ಪೊಲೀಸರು ಹೇಳಿದಂತೆ ಕೇಳಿ: ಪೊಲೀಸರು ನಿಮಗೆ ಫೋನ್ನಲ್ಲಿ ನೀಡುವ ಮಾಹಿತಿಯನ್ನು ಸರಿಯಾಗಿ ಕೇಳಿಸಿಕೊಳ್ಳಿ. ಅವರು ಹೇಳಿದಂತೆಯೇ ಮಾಡಿ.
- ಕಳ್ಳ ಯಾವ ರೀತಿ ಇದ್ದಾನೆ?: ಅವನು ಯಾವ ರೀತಿ ಇದ್ದಾನೆ. ಕೈಯಲ್ಲಿ ಏನಾದರೂ ಇದೆಯಾ? ಎಷ್ಟುದ್ದ ಇದ್ದಾನೆ. ಹೇಗಿದ್ದಾನೆ? ಬಣ್ಣ,ಕೂದಲು ಉದ್ದ,ದಪ್ಪ ಎಲ್ಲವನ್ನೂ ನೋಡಿಕೊಳ್ಳಿ. ಅವನು ಹೋದಮೇಲೆ ಪೊಲೀಸರಿಗೆ ಮಾಹಿತಿ ಮುಖ್ಯವಾಗುತ್ತದೆ.
- ಧೈರ್ಯ ಇರಲಿ: ಇಷ್ಟೆಲ್ಲಾ ಮಾಡಲು ನಿಮಗೆ ಧೈರ್ಯ ಇರುವುದು ಮುಖ್ಯ. ಅತಿ ದೈರ್ಯದಿಂದ ನಾವು ಅವರನ್ನು ಮಣಿಸುತ್ತೇವೆ ಎಂಬ ಬಂಡಧೈರ್ಯವೂ ಬೇಡ. ಮೊಬೈಲ್ ನಿಮ್ಮ ಕೈಲಿದ್ದರೆ ನಿಮ್ಮ ಮನೆಯ ಹತ್ತಿರದವರಿಗೆ ಸ್ನೇಹಿತರಿಗೆ ಹೇಳಿ. ಅವರು ಸಹಾಯ ಮಾಡುತ್ತಾರೆ.